ಪಿಡಿಓ ಕೊಲೆ: ಆರೋಪಿಗಳನ್ನು ಬಂಧಿಸಲು ಒತ್ತಾಯ


 ರಾಯಚೂರು,ಅ.೮- ಲಿಂಗಸೂಗೂರು ತಾಲೂಕಿನ ಕೋಠ ಗ್ರಾಮ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾದ ಗಜದಂಡಯ್ಯ ಸ್ವಾಮಿ ಇವರನ್ನು ಕೊಲೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಅ.೬ ರಂದು ಲಿಂಗಸೂಗೂರು ತಾಲೂಕಿನ ಕೋಠ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಕೊಲೆ ಮಾಡಿದವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರಿಗೆ ಸೂಕ್ತ ಭದ್ರತೆ ಮತ್ತು ರಕ್ಷಣೆ ಇಲ್ಲದಂತಾಗಿದೆ ಆದುದರಿಂದ ಈ ಸರ್ಕಾರಿ ನೌಕರನಾದ ಗಜದಂಡಯ್ಯ ಸ್ವಾಮಿ ಇವರನ್ನು ಕೊಲೆ ಮಾಡಿದವರು ಯಾರೇ ಇರಲಿ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

Post a Comment

Previous Post Next Post