ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ

 ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಸೋಮವಾರ ಆರು ರಾಜ್ಯಗಳ ಏಳು ವಿಧಾನ ಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಿಸಿದೆ.
ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಹೊರ ಬೀಳಲಿದೆ.

ಮಹಾರಾಷ್ಟ್ರದ ಅಂಧೇರಿ ವೆಸ್ಟ್, ಬಿಹಾರದ ಮೂಕಾಮ್ ಹಾಗೂ ಗೋಪಾಲ್ ಗಂಜ್, ಹರಿಯಾಣದ ಆದಂಪುರ, ತೆಲಂಗಾಣದ ಮೂನು ಗೂಡ, ಉತ್ತರ ಪ್ರದೇಶದ ಗೋಲ ಗೋರಕ್ನಾಥ್ ಮತ್ತು ಒಡಿಸ್ಸಾದ ಧಾಮ್ನಗರ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯ ಲಿದೆ.

ಅ.7ರಂದು ಗೆಜೆಟ್ ನೋಟಿಫಿಕೇಶನ್ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆಗೆ ಅ.14 ಅಂತಿಮ ದಿನಾಂಕವಾಗಿದೆ. ಅ. 15ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಅ.17 ಕೊನೆಯ ದಿನಾಂಕವಾಗಿದೆ.

ನವೆಂಬರ್ 3ರ ಗುರುವಾರ ಉಪಚುನಾವಣೆಗೆ ಮತದಾನ ನಡೆಯಲಿದ್ದು, ನವೆಂಬರ್ 6ರ ಭಾನುವಾರ ಮತ ಎಣಿಕೆ ಕಾರ್ಯ ನಡೆಯಲಿದೆ.

Post a Comment

Previous Post Next Post