ಕಾನ್ಸರ್ ರೋಗಿಗಳಿಗೆ ನೆರವು: ಗಾಂಧಿ ಜಯಂತಿಯಂದು ಮ್ಯಾರಥಾನ್ ಓಟ

 ಕ್ಯಾನ್ಸರ್ ರೋಗಿಗಗಳಿಗೆ ನೆರವಿನ ಸಹಾಯ ಹಸ್ತ ಚಾಚಲು ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಸಹಯೋಗದಲ್ಲಿ ರೋಟರಿ ವಿದ್ಯಾರಣ್ಯಪುರ ನಾಳೆ ಅಕ್ಟೋಬರ್ 2ರ ಗಾಂಧಿ ಜಯಂತಿಯನ್ನು ರನ್ ವಿತ್ ರೋಟರಿ ಎಂಬ ನಿಧಿ ಸಂಗ್ರಹಣಾ ಓಟವನ್ನು ಆಯೋಜಿಸಿದೆ. 

                    ಸಾಂದರ್ಭಿಕ ಚಿತ್ರ

By: Rekha.M

Online Desk

ಬೆಂಗಳೂರು: ಕ್ಯಾನ್ಸರ್ ರೋಗಿಗಗಳಿಗೆ ನೆರವಿನ ಸಹಾಯ ಹಸ್ತ ಚಾಚಲು ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಸಹಯೋಗದಲ್ಲಿ ರೋಟರಿ ವಿದ್ಯಾರಣ್ಯಪುರ ನಾಳೆ ಅಕ್ಟೋಬರ್ 2ರ ಗಾಂಧಿ ಜಯಂತಿಯನ್ನು ರನ್ ವಿತ್ ರೋಟರಿ ಎಂಬ ನಿಧಿ ಸಂಗ್ರಹಣಾ ಓಟವನ್ನು ಆಯೋಜಿಸಿದೆ. 

ಭರವಸೆಯ ಆಶಾಕಿರಣ ಎಂಬ ಧ್ಯೇಯದೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ನಿಧಿ ಸಂಗ್ರಹಿಸಲು ಈ ಓಟವನ್ನು ಆಯೋಜಿಸಲಾಗಿದೆ. ಈ ಓಟದ ವೈಶಿಷ್ಟ್ಯವೆಂದರೆ ಮಕ್ಕಳಿಗಾಗಿ 1 ಕಿಲೋಮೀಟರ್ ಮೋಜಿನ ನಡಿಗೆಯಾಗಿದೆ.

ವಿದ್ಯಾರಣ್ಯಪುರದ ಎನ್ ಟಿಇ ಮೈದಾನದಲ್ಲಿ ಈ ಓಟ ಆರಂಭವಾಗಲಿದ್ದು, ಟೈಮಿಂಗ್ ಚಿಪ್ನೊಂದಿಗೆ  10 ಕಿಮೀ ಸ್ಪರ್ಧಾತ್ಮಕ ಓಟ, ಟೈಮಿಂಗ್ ಚಿಪ್ ಇಲ್ಲದೆ 5 ಕಿಮೀ ಮೋಜಿನ ಓಟ ಮತ್ತು ಮಕ್ಕಳಿಗಾಗಿ 1 ಕಿಮೀ ಮೋಜಿನ ನಡಿಗೆ ಇರಲಿದೆ ಎಂದು ರೋಟರಿ ವಿದ್ಯಾರಣ್ಯಪುರ ಅಧ್ಯಕ್ಷೆ ಅಪರ್ಣ ಕನ್ನಂಪಲ್ಲಿ ತಿಳಿಸಿದ್ದಾರೆ.


    Post a Comment

    Previous Post Next Post