ನಿವೇಶನಗಳಿಗೆ ಗಗನಕ್ಕೇರಿದ ಬೆಲೆ: ಸೈಟ್ ಮಾರಾಟ ಮಾಡಿದವರಿಂದ ಜಕ್ಕೂರಿನ ಖಾದಿ ಲೇ ಔಟ್ ಸೈಟ್ ಗಳಿಗೆ ಬೀಗ!

 ಸರ್ಕಾರಿ ಫ್ಲೈಯಿಂಗ್ ತರಬೇತಿ ಶಾಲೆಯ ಹಿಂಭಾಗದ ಜಕ್ಕೂರಿನಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹನ್ನೊಂದು ಎಕರೆ ಭೂಮಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಮೂರು ದಶಕಗಳ ಹಿಂದೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿದ ರೈತರ ಕುಟುಂಬಗಳು ಇತ್ತೀಚೆಗೆ ನಗರದ ಭೂಮಾಫಿಯಾದ ಭಾಗವಾಗಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ 252 ಸೈಟ್ ಮಾಲೀಕರಿಗೆ ಪ್ರವೇಶವನ್ನು ನಿರ್ಬಂಧ

            ನಿವೇಶನ

By : Rekha.M
Online Desk

ಬೆಂಗಳೂರು: ಸರ್ಕಾರಿ ಫ್ಲೈಯಿಂಗ್ ತರಬೇತಿ ಶಾಲೆಯ ಹಿಂಭಾಗದ ಜಕ್ಕೂರಿನಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹನ್ನೊಂದು ಎಕರೆ ಭೂಮಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಮೂರು ದಶಕಗಳ ಹಿಂದೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿದ ರೈತರ ಕುಟುಂಬಗಳು ಇತ್ತೀಚೆಗೆ ನಗರದ ಭೂಮಾಫಿಯಾದ ಭಾಗವಾಗಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿ 252 ಸೈಟ್ ಮಾಲೀಕರಿಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.

ಆಸ್ತಿಯನ್ನು ಖರೀದಿಸಿದವರು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಉದ್ಯೋಗಿಗಳು. ಪ್ರಸ್ತುತ ಅವರಲ್ಲಿ ಶೇಕಡಾ 90ರಷ್ಟು ಹಿರಿಯ ನಾಗರಿಕರು ಇದ್ದಾರೆ. ಕೆಲವರು ತೀರಿಹೋಗಿದ್ದಾರೆ ಇನ್ನು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. 

ನಿವೇಶನ ಖರೀದಿಸಿದವರ ಪರವಾಗಿ ಮಾತನಾಡುವ ನಟರಾಜ್ ಪುರುಡಪ್ಪ ಅವರ ತಂದೆ 30x40 ಚದರ ಅಡಿ ನಿವೇಶನವನ್ನು 45,000 ರೂಪಾಯಿಗೆ ಖರೀದಿಸಿದ್ದರಂತೆ. ನಾನು ಸುಮಾರು ಎರಡು ತಿಂಗಳ ಹಿಂದೆ ಸೈಟ್ ಬಳಿ ಹೋಗಿ ನೋಡಿದಾಗ ಎರಡೂ ಪ್ರವೇಶದ್ವಾರಗಳಲ್ಲಿ ಗೇಟ್‌ಗಳು ಬಂದಿರುವುದನ್ನು ನಾನು ನೋಡಿದೆ. ಲೇ ಔಟ್ ಗೆ ಭದ್ರತೆ ನಿಯೋಜಿಸಲಾಗಿದೆ ಎನ್ನುತ್ತಾರೆ. 

“ಈ ಸೈಟ್‌ನ ಪ್ರಸ್ತುತ ಮಾರುಕಟ್ಟೆ ಮೌಲ್ಯವು 1 ಕೋಟಿ ರೂಪಾಯಿ ಆಗಿದ್ದರೆ, 40x60 ಚದರ ಅಡಿ ಸೈಟ್‌ಗಳು (1 ಲಕ್ಷಕ್ಕೂ ಹೆಚ್ಚು ಬೆಲೆಗೆ ಖರೀದಿಸಲಾಗಿದೆ) 2 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಸೈಟ್ ಮಾರಾಟ ಮಾಡಿದವರು ಈಗ ಹೆಚ್ಚಿದ ನಿವೇಶನ ಬೆಲೆಯಿಂದಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು. ಖರೀದಿದಾರರು ಆಸ್ತಿಗಳನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಿಕೊಂಡಿದ್ದು ಮಾರಾಟ ಪತ್ರವನ್ನು ಹೊಂದಿದ್ದಾರೆ. 

2016ರಲ್ಲಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಯಾವುದೇ ಕ್ರಮ ಕೈಗೊಳ್ಳದೆ ಮುಚ್ಚಲಾಗಿದೆ ಎಂದು ಪುರುಡಪ್ಪ ಆರೋಪಿಸಿದ್ದಾರೆ. ಬಿಡಿಎ ತನ್ನ ಅರ್ಕಾವತಿ ಬಡಾವಣೆಗೆ 2003-2004ರಲ್ಲಿ 11 ಎಕರೆಯನ್ನು ಸ್ವಾಧೀನಪಡಿಸಿಕೊಳ್ಳಲು ಸೂಚನೆ ನೀಡಿತ್ತು. ನಂತರ 2014 ರಲ್ಲಿ ಭೂಮಿಯನ್ನು ಡಿನೋಟಿಫೈ ಮಾಡಿ ಆಸ್ತಿಯನ್ನು ಹಿಂತಿರುಗಿಸಲಾಯಿತು. 


    Post a Comment

    Previous Post Next Post