ಮಹಾರಾಷ್ಟ್ರ: ಡ್ಯಾನ್ಸ್ ಮಾಡುತ್ತಿರುವಾಗ್ಲೇ ವ್ಯಕ್ತಿ ಸಾವು, ಬಳಿಕ ಆಘಾತದಿಂದ ಆತನ ತಂದೆಯೂ ನಿಧನ!

 ಮನುಷ್ಯನ ಬದುಕಲ್ಲಿ ವಿಧಿಯಾಟ ಹೇಗಿರುತ್ತೆ ಅಂತ ಯಾರೂ ಊಹಿಸೋಕೆ ಸಾಧ್ಯವಿಲ್ಲ. ಇದು ಅಂಥದ್ದೇ ನೋವಿನ ಘಟನೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ಗರ್ಭಾ ಕಾರ್ಯಕ್ರಮವೊಂದರಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ನೃತ್ಯ...

              ಮನೀಶ್ ನಾರಾಪ್ಜಿ ಸೋನಿಗ್ರಾ

By : Rekha.M
Online Desk

ಪಾಲ್ಘರ್: ಮನುಷ್ಯನ ಬದುಕಲ್ಲಿ ವಿಧಿಯಾಟ ಹೇಗಿರುತ್ತೆ ಅಂತ ಯಾರೂ ಊಹಿಸೋಕೆ ಸಾಧ್ಯವಿಲ್ಲ. ಇದು ಅಂಥದ್ದೇ ನೋವಿನ ಘಟನೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ಗರ್ಭಾ ಕಾರ್ಯಕ್ರಮವೊಂದರಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ನೃತ್ಯ ಮಾಡುವಾಗಲೇ ಸಾವನ್ನಪ್ಪಿದ್ದು, ಬಳಿಕ ಅವರ ತಂದೆಯೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಭಾನುವಾರ ಮಧ್ಯರಾತ್ರಿ ವಿರಾರ್‌ನ ಗ್ಲೋಬಲ್ ಸಿಟಿ ಕಾಂಪ್ಲೆಕ್ಸ್‌ನಲ್ಲಿ ನಡೆದ ಗಾರ್ಭಾ ಕಾರ್ಯಕ್ರಮವೊಂದರಲ್ಲಿ ಮನೀಶ್ ನಾರಾಪ್ಜಿ ಸೋನಿಗ್ರಾ ಅವರು ನೃತ್ಯ ಮಾಡುವಾಗ ಕುಸಿದು ಬಿದ್ದಿದ್ದರು. ಆ ವ್ಯಕ್ತಿಯನ್ನು ಅವರ ತಂದೆ ನಾರಾಪ್ಜಿ ಸೋನಿಗ್ರಾ(66) ಅವರು ಆಸ್ಪತ್ರೆಗೆ ಸಾಗಿಸಿದರು. ಆದರೆ ಅಲ್ಲಿ ತಮ್ಮ ಮಗನ ಸಾವಿನ ಸುದ್ದಿ ತಿಳಿದ ಕೂಡಲೇ ಶಾಕ್ ಗೆ ಒಳಗಾಗಿ ಅವರೂ ಕೂಡ ಕುಸಿದುಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.Post a Comment

Previous Post Next Post