ಬಳ್ಳಾರಿ: ಗ್ರಾಮಸ್ಥರ ಒಗ್ಗಟ್ಟಿನಿಂದ ಜಿಲ್ಲೆಯ ಮೊಟ್ಟ ಮೊದಲ ಮದ್ಯಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ಉಪ್ಪಾರಹಳ್ಳಿ!

 ಗ್ರಾಮದ ಹಿರಿಯರ ಶ್ರಮದಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ.

          ಮದ್ಯ ಮುಕ್ತ ಗ್ರಾಮ ಉಪ್ಪಾರಹಳ್ಳಿ

By : Rekha.M
Online Desk

ಬಳ್ಳಾರಿ: ಗ್ರಾಮದ ಹಿರಿಯರ ಶ್ರಮದಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮವನ್ನು ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ.

ಗ್ರಾಮದಲ್ಲಿ ಮದ್ಯ ಸೇವನೆ ಮತ್ತು ಮಾರಾಟವನ್ನು ಗ್ರಾಮದ ಮುಖಂಡರು ನಿಷೇಧಿಸಿದ ನಂತರ ಈ 'ವಿಶಿಷ್ಟ ಹಣೆಪಟ್ಟಿ' ಪಡೆದ ಜಿಲ್ಲೆಯ ಮೊದಲ ಗ್ರಾಮ ಇದಾಗಿದೆ. ಗ್ರಾಮದಲ್ಲಿ ಯಾರಾದರು ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ಗ್ರಾಮದ ಮುಖಂಡರು ದಂಡ ವಿಧಿಸುತ್ತಾರೆ.

ಇತ್ತೀಚೆಗೆ ಗ್ರಾಮದ ಪ್ರವೇಶ ದ್ವಾರದಲ್ಲಿ ‘ಮದ್ಯಮುಕ್ತ ಗ್ರಾಮ’ ಎಂಬ ಬೋರ್ಡ್ ಅಳವಡಿಸಲಾಗಿದೆ. ಮದ್ಯಮುಕ್ತ ಗ್ರಾಮವನ್ನಾಗಿಸಲು ಅನೇಕರು ಹೆಣಗಾಡಿದ್ದಾರೆ ಎನ್ನುತ್ತಾರೆ ಗ್ರಾಮದ ಹಿರಿಯರು.

ತಮ್ಮ ಗ್ರಾಮವನ್ನು ಮದ್ಯ ಮುಕ್ತಗೊಳಿಸಿರುವುದು ಎಲ್ಲ ನಿವಾಸಿಗಳಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಉಪ್ಪಾರಹಳ್ಳಿ ನಿವಾಸಿ ನಾಗಪ್ಪ ಮಾದರ ಹೇಳಿದ್ದಾರೆ. ಕಳೆದ ಎರಡು ವರ್ಷಗಳಿಂದ ಮದ್ಯಮುಕ್ತ ಗ್ರಾಮ ಎಂದು ಘೋಷಿಸಲು ಪ್ರಯತ್ನಿಸುತ್ತಿದ್ದರೂ ಹಲವು ಕಾರಣಗಳಿಂದ ಸಾಧ್ಯವಾಗಿರಲಿಲ್ಲ.

ಕೆಲವು ತಿಂಗಳ ಹಿಂದೆ, ನಾವು ಗ್ರಾಮದಲ್ಲಿ ಶಿಕ್ಷಕರು, ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ವಿವಿಧ ಗುಂಪುಗಳನ್ನು ರಚಿಸಿದೆವು, ಮದ್ಯದ ದುಷ್ಪರಿಣಾಮಗಳ ಅರಿವು ಮೂಡಿಸಲು ತಂಡಗಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದವು, ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮದ್ಯಮುಕ್ತ ಗ್ರಾಮವನ್ನಾಗಿ ಘೋಷಿಸಲು ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.

ಅಲ್ಲದೆ, ಗ್ರಾಮಸ್ಥರು, ಸರ್ಕಾರಿ ನೌಕರರು, ಆಶಾ ಕಾರ್ಯಕರ್ತೆಯರು ಮತ್ತು ಎನ್‌ಜಿಒ ಸದಸ್ಯರು ರಚಿಸಿದ ತಂಡಗಳನ್ನು ಸಹ ಅಭಿಯಾನಕ್ಕೆ ನಿಯೋಜಿಸಲಾಗಿತ್ತು. ನಮ್ಮ ಗ್ರಾಮದಲ್ಲಿ 1,300 ಜನಸಂಖ್ಯೆ ಇದೆ. ಕುಡಿತದ ಚಟಕ್ಕೆ ಬಿದ್ದವರು ಯಾರು ಎಂಬುದು ನಮಗೆ ಗೊತ್ತಿತ್ತು. ವ್ಯಸನಿಗಳು ತಮ್ಮ ಅಭ್ಯಾಸವನ್ನು ತೊರೆಯುವಂತೆ ಮನವೊಲಿಸಲು ನಾವು ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದೆವು.

ಗ್ರಾಮಕ್ಕೆ ಈ ವಿಶೇಷ ಸ್ಥಾನಮಾನ ಸಿಗಬೇಕು ಎಂಬ ಗ್ರಾಮದ ಮುಖಂಡರ ಕನಸಿನ ಬಗ್ಗೆಯೂ ಗ್ರಾಮಸ್ಥರಿಗೆ ತಿಳಿಸಿದ್ದೇವೆ. ಅಕ್ರಮವಾಗಿ ಮದ್ಯ ಸಂಗ್ರಹಿಸುತ್ತಿದ್ದ ಅಂಗಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಗ್ರಾಮಕ್ಕೆ ಮದ್ಯ ಸೇವಿಸಿ ಬರುವವರು ದಂಡ ತೆರಬೇಕು,’’ ಎಂದು ಹೇಳಿದರು.

ಗ್ರಾಮದಲ್ಲಿ ಪ್ರಮುಖವಾಗಿ ಮದ್ಯವ್ಯಸನಿಗಳನ್ನು ಹೊಂದಿರುವ ಕುಟುಂಬಗಳಲ್ಲಿ ಸಂಬಂಧಿಕರ ನಡುವೆ ಜಗಳಗಳು ನಡೆದಿವೆ. ಇದರಿಂದ ಗ್ರಾಮದ ಹಿರಿಯರು ಬಹಳ ಶ್ರಮ ಪಟ್ಟಿದ್ದರಿಂದ ಇದು ಸಾಧ್ಯವಾಗಿದೆ. ಇಂದು ನಮ್ಮ ಗ್ರಾಮ ಇತರರಿಗೆ ಮಾದರಿಯಾಗಿದೆ ಎಂದರು.


Post a Comment

Previous Post Next Post