ಜಮ್ಮು-ಕಾಶ್ಮೀರ: ಎನ್ ಕೌಂಟರ್ ನಲ್ಲಿ ನಾಲ್ವರು ಜೆಇಎಂ ಉಗ್ರರ ಹತ್ಯೆ

 ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ನೀರದ ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಜೈಷ್ -ಇ-ಮೊಹಮ್ಮದ್ ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿರುವುದಾಗಿ ಪೊಲೀಸರು ಇಂದು ಬೆಳಗ್ಗೆ  ತಿಳಿಸಿದ್ದಾರೆ. 

            ಭದ್ರತಾ ಪಡೆಗಳು

By : Rekha.M
Online Desk

ಶೋಪಿಯಾನ್: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ನೀರದ ಶೋಪಿಯಾನ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಜೈಷ್ -ಇ-ಮೊಹಮ್ಮದ್ ಸಂಘಟನೆಗೆ ಸೇರಿದ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿರುವುದಾಗಿ ಪೊಲೀಸರು ಇಂದು ಬೆಳಗ್ಗೆ ತಿಳಿಸಿದ್ದಾರೆ. 

ಶೋಫಿಯಾನ್ ನ ಎರಡು ಕಡೆಗಳಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು  ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಜೆಇಎಂ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಮೂವರು ಸ್ಥಳೀಯ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೊಲು ಪ್ರದೇಶದಲ್ಲಿ ಎರಡನೇ ಎನ್ ಕೌಂಟರ್ ಪ್ರಗತಿಯಲ್ಲಿದೆ. ಹತ್ಯೆಗೀಡಾದ ಉಗ್ರರಾದ ಹನಾನ್ ಬಿನ್ ಯಾಕೂಬ್ ಮತ್ತು ಜಮ್ ಶೇಡ್ ಅಕ್ಟೋಬರ್ 2 ರಂದು ಪುಲ್ವಾಮಾದಲ್ಲಿ ನಡೆದ ಎಸ್ ಪಿ ಒ ಜಾವೇದ್ ದಾರ್ ಮತ್ತು ಸೆಪ್ಟೆಂಬರ್ 24 ರಂದು ನಡೆದಿದ್ದ ಪಶ್ಚಿಮ ಬಂಗಾಳದ ಕಾರ್ಮಿಕರ ಹತ್ಯೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ. Post a Comment

Previous Post Next Post