15 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಭಾರೀ ಸಮಸ್ಯೆ: ಅರ್ಧದಷ್ಟು ಹುದ್ದೆ ಭರ್ತಿ ಮಾಡಲು ಅಭ್ಯರ್ಥಿಗಳ ಕೊರತೆ!

 ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳಿಗೆ 15 ಸಾವಿರ ಶಿಕ್ಷಕರ ನೇಮಕಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೈಗೊಂಡಿರುವ ಅಭಿಯಾನಕ್ಕೆ ತಡೆಯುಂಟಾಗಿದೆ. ಕಾರಣ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದರ ಅರ್ಧದಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಸಾಕಷ್ಟು ಅರ್ಹ ಅಭ್ಯರ್ಥಿಗಳಿಲ್ಲ.

                                                      ಸಾಂದರ್ಭಿಕ ಚಿತ್ರ
By : Rekha.M
Online Desk

ಬೆಂಗಳೂರು: ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳಿಗೆ 15 ಸಾವಿರ ಶಿಕ್ಷಕರ ನೇಮಕಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೈಗೊಂಡಿರುವ ಅಭಿಯಾನಕ್ಕೆ ತಡೆಯುಂಟಾಗಿದೆ. ಕಾರಣ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದರ ಅರ್ಧದಷ್ಟು ಹುದ್ದೆಗಳನ್ನು ಭರ್ತಿ ಮಾಡಲು ಸಾಕಷ್ಟು ಅರ್ಹ ಅಭ್ಯರ್ಥಿಗಳಿಲ್ಲ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಾಕಷ್ಟು ಅರ್ಹ ಅಭ್ಯರ್ಥಿಗಳು ಇಲ್ಲ. ರಾಯಚೂರಿನಲ್ಲಿ ಸುಮಾರು 469 ಗಣಿತ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, 230 ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಇಲಾಖೆಯು 1:2 ಅನುಪಾತದ ವಿಧಾನವನ್ನು ಅನುಸರಿಸುತ್ತಿದ್ದು, ಅದರ ಅಡಿಯಲ್ಲಿ ಪ್ರತಿ ಹುದ್ದೆಗೆ 2 ಅಭ್ಯರ್ಥಿಗಳನ್ನು ಅಖೈರು ಮಾಡಲಾಗುತ್ತದೆ. ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರನ್ನು ಹಿರಿತನ, ಅನುಭವ ಮತ್ತು ಅವರ ಪದವಿಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ಶಿಕ್ಷಕರ ಕೊರತೆ ಇದೆ. 363 ಹುದ್ದೆಗಳು ಖಾಲಿ ಇದ್ದು, ದಾಖಲೆ ಪರಿಶೀಲನೆಯ ನಂತರ 520 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಹಾವೇರಿ ಡಿಡಿಪಿಐ ಬಿಎಸ್ ಜಗದೀಶ್ವರ್ ಟಿಎನ್‌ಐಇಗೆ ತಿಳಿಸಿದರು.ಹಲವಾರು ಜಿಲ್ಲಾ ಸಾರ್ವಜನಿಕ ಶಿಕ್ಷಣದ ಉಪ ನಿರ್ದೇಶಕರ (DDPI ) ಕೊರತೆಯ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದರು. 

‘ವಿಷಯ ಶಿಕ್ಷಕರ ಕೊರತೆ’
ಬೀದರ್ ಡಿಡಿಪಿಐ ಗಣಪತಿ ಭರತಕ್ಕೆ, ಖಾಲಿ ಇರುವ 967 ಹುದ್ದೆಗಳಿಗೆ ಕೇವಲ 647 ಅಭ್ಯರ್ಥಿಗಳಿದ್ದಾರೆ. ಬಳ್ಳಾರಿಯಲ್ಲಿ 523 ಹುದ್ದೆಗಳಿಗೆ 678 ಅಭ್ಯರ್ಥಿಗಳಿದ್ದಾರೆ. ಚಿಕ್ಕೋಡಿಯಲ್ಲಿ 1,271 ಹುದ್ದೆಗಳು ಖಾಲಿ ಇದ್ದು, 1,940 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದಾರೆ. ಕೊಪ್ಪಳದಲ್ಲಿ 567 ಹುದ್ದೆಗಳಿಗೆ 750ರಿಂದ 770 ಅಭ್ಯರ್ಥಿಗಳಿದ್ದಾರೆ ಎಂದರು. 

ನಾವು ವಿಶೇಷವಾಗಿ ವಿಷಯ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದೇವೆ ಎಂದು ಕೊಪ್ಪಳ ಡಿಡಿಪಿಐ ಮುತ್ತರೆಡ್ಡಿ ರೆಡ್ಡರ್ TNIE ಗೆ ತಿಳಿಸಿದರು. ಅಭ್ಯರ್ಥಿಗಳ ವಿಷಯವಾರು ನೋಡಿದರೆ, ಇಂಗ್ಲಿಷ್ ಶಿಕ್ಷಕರಿಗೆ 27 ಹುದ್ದೆಗಳಿವೆ, ಆದರೆ 45 ಅರ್ಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ಜಗದೀಶ್ವರ್ ಹೇಳಿದರು.

Post a Comment

Previous Post Next Post