ಕೋಲಾರ ದೇವರ ಮೆರವಣಿಗೆ ವಿಚಾರ: ದಲಿತ- ಮೇಲ್ವರ್ಗದವರ ನಡುವಿನ ಹಗೆತನಕ್ಕೆ ಸೇತುವೆಯಾದ ಪೊಲೀಸರು

 ಘಟನೆ ನಡೆದ 24 ಗಂಟೆಯೊಳಗೆ ಕೋಲಾರ ಪೊಲೀಸರು ಎಸ್ಪಿ ಡಿ. ದೇವರಾಜ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಸಮುದಾಯಗಳ ನಡುವಿನ ವೈಷಮ್ಯವನ್ನು ಬಗೆಹರಿಸಲು ಪರಿಹಾರವನ್ನು ಕಂಡುಕೊಳ್ಳಲಾಗಿದೆ ಎಂದು ಕೇಂದ್ರ ಶ್ರೇಣಿಯ ಐಜಿಪಿ ಎಂ ಚಂದ್ರಶೇಖರ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

                                                  ಪೊಲೀಸ್ (ಸಾಂಕೇತಿಕ ಚಿತ್ರ)

By : Rekha.M

ಕೋಲಾರ: ತಾಲೂಕಿನ ನರಸಾಪುರ ಹೋಬಳಿಯ ದಾನವನಹಳ್ಳಿ ಗ್ರಾಮದಲ್ಲಿ ದಲಿತ ಸಮುದಾಯದವರು ಹಾಗೂ ಮೇಲ್ವರ್ಗದವರ ನಡುವೆ ಘರ್ಷಣೆ ನಡೆದಿದ್ದು, ಕೋಲಾರ ಪೊಲೀಸರು ಎರಡು ಸಮುದಾಯದ ಜನರ ನಡುವೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು.

ಘಟನೆ ನಡೆದ 24 ಗಂಟೆಯೊಳಗೆ ಕೋಲಾರ ಪೊಲೀಸರು ಎಸ್ಪಿ ಡಿ. ದೇವರಾಜ್ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿ ಗ್ರಾಮದಲ್ಲಿ ಸಾಮರಸ್ಯ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಸಮುದಾಯಗಳ ನಡುವಿನ ವೈಷಮ್ಯವನ್ನು ಬಗೆಹರಿಸಲು ಪರಿಹಾರವನ್ನು ಕಂಡುಕೊಳ್ಳಲಾಗಿದೆ ಎಂದು ಕೇಂದ್ರ ಶ್ರೇಣಿಯ ಐಜಿಪಿ ಎಂ ಚಂದ್ರಶೇಖರ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಉಪ ಎಸ್ಪಿ ಮುರಳೀಧರ್, ತಹಸೀಲ್ದಾರ್ ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಎರಡೂ ಸಮುದಾಯದವರನ್ನು ಎಸ್ಪಿ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಗಂಗಮ್ಮ ಮತ್ತು ಕಾಟೀರಮ್ಮ ದೇವಿಯ ಅದ್ಧೂರಿ ಮೆರವಣಿಗೆಯನ್ನು ಗ್ರಾಮದ ಎಲ್ಲಾ ಮನೆಗಳಿಗೆ ಕೊಂಡೊಯ್ಯಲು ನಿರ್ಧರಿಸಲಾಯಿತು. ಈ ಕ್ರಮವನ್ನು ರಾಜಕಾರಣಿಗಳು ಸ್ವಾಗತಿಸಿದ್ದಾರೆ.

ದಾನವನಹಳ್ಳಿಯ ಗ್ರಾಮಸ್ಥರು ತಮ್ಮ ಗ್ರಾಮ ದೇವತೆಗಳಾದ ಗಂಗಮ್ಮ ಮತ್ತು ಕಾಟೀರಮ್ಮ ಅವರನ್ನು ದಲಿತ ಸಮುದಾಯದ ಜನರು ವಾಸಿಸುವ ಬೀದಿಗಳಲ್ಲಿ ಮೆರವಣಿಗೆ ಮಾಡಲು ನಿರಾಕರಿಸಿದ್ದರು. ಇದರಿಂದ ಮೇಲ್ವರ್ಗ ಮತ್ತು ದಲಿತರ ನಡುವೆ ಸಂಘರ್ಷ ಏರ್ಪಟ್ಟಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಕಾರಣ ಎರಡೂ ಸಮುದಾಯಗಳ ಕೆಲವು ಜನರು ಗಾಯಗೊಂಡಿದ್ದರು.

ಮುನಿಯಪ್ಪ ಎಂಬುವವರು ಮಾತನಾಡಿ, ದಸರಾಗೆ ಏರ್ಪಡಿಸಲಾಗಿದ್ದ ತಮ್ಮ ಗ್ರಾಮ ದೇವತೆಗಳ ಮೆರವಣಿಗೆ ಕುರಿತು ಚರ್ಚಿಸಲು ದಲಿತ ಸಮುದಾಯದ ಹಲವಾರು ಜನರು ತಮ್ಮ ಗ್ರಾಮದ ಮರದ ಕೆಳಗೆ ಜಮಾಯಿಸಿದ್ದರು. ಈಮಧ್ಯೆ, ಮೇಲ್ವರ್ಗದ ಜನರು ಮೆರವಣಿಗೆಯನ್ನು ದಲಿತರಿರುವ ಬೀದಿಗಳಿಗೆ ಕೊಂಡೊಯ್ಯುವುದಿಲ್ಲ ಎಂದು ಹೇಳಿದರು. ಇದು ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು ಎನ್ನುತ್ತಾರೆ.

ಮತ್ತೊಂದೆಡೆ, ಎದುರಾಳಿ ಗುಂಪಿನ ವಿರುದ್ಧ ಕೊಲೆ ಯತ್ನ ನಡೆಸಿದ್ದಾರೆ ಎಂದು  ಮೇಲ್ವರ್ಗದ ಸದಸ್ಯ ಹರೀಶ್ ಆರೋಪಿಸಿದ್ದು, ಈ ಸಂಬಂಧ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


Post a Comment

Previous Post Next Post