ತಲಾಖ್ ಘೋಷಣೆಯ ಏಕಪಕ್ಷೀಯ ವಿಧಾನಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ರಾಜ್ಯದ ಮಹಿಳೆ

 ‘ತಲಾಖ್‌-ಎ-ಕಿನಾಯಾ’ ಮತ್ತು ‘ತಲಾಖ್-ಎ-ಬೈನ್’ ಸೇರಿದಂತೆ ಎಲ್ಲಾ ರೀತಿಯ ಏಕಪಕ್ಷೀಯ ತಲಾಖ್ ಅನ್ನು ಅಸಿಂಧು ಮತ್ತು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ರಾಜ್ಯದ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

                      ಸಾಂದರ್ಭಿಕ ಚಿತ್ರ

By : Rekha.M
Online Desk

ನವದೆಹಲಿ: ‘ತಲಾಖ್‌-ಎ-ಕಿನಾಯಾ’ ಮತ್ತು ‘ತಲಾಖ್-ಎ-ಬೈನ್’ ಸೇರಿದಂತೆ ಎಲ್ಲಾ ರೀತಿಯ ಏಕಪಕ್ಷೀಯ ತಲಾಖ್ ಅನ್ನು ಅಸಿಂಧು ಮತ್ತು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ರಾಜ್ಯದ ಮಹಿಳೆಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತಲಾಖ್-ಎ-ಕಿನಾಯಾ/ತಲಾಕ್-ಇ-ಬೈನ್ ಅನ್ನು ಕಿನಾಯ ಪದಗಳ ಮೂಲಕ ನೀಡಲಾಗುತ್ತದೆ. ಅಂದರೆ, ನಾನು ನಿಮ್ಮನ್ನು ಮುಕ್ತಗೊಳಿಸುತ್ತೇನೆ, ನೀವು ಈಗ ಸ್ವತಂತ್ರರಾಗಿದ್ದೀರಿ, ನೀವು ಈ ಸಂಬಂಧದಿಂದ ಮುಕ್ತರಾಗಿದ್ದೀರಿ, ನೀವು ಈಗ ನನ್ನಿಂದ ಬೇರ್ಪಟ್ಟಿದ್ದೀರಿ ಇತ್ಯಾದಿಗಳನ್ನು ಸೂಚಿಸುತ್ತದೆ.

ತಲಾಖ್-ಇ-ಕಿನಾಯಾ ಮತ್ತು ತಲಾಖ್-ಇ-ಬೈನ್ ಮತ್ತು ಇತರ ರೀತಿಯ ಏಕಪಕ್ಷೀಯ ಅಭ್ಯಾಸಗಳು ಮಾನವ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಆಧುನಿಕ ತತ್ವಗಳೊಂದಿಗೆ ಸಾಮರಸ್ಯವನ್ನು ಹೊಂದಿಲ್ಲ ಅಥವಾ ಇಸ್ಲಾಮಿಕ್ ನಂಬಿಕೆಯ ಅವಿಭಾಜ್ಯ ಅಂಗವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ತಮ್ಮ ಪತಿಯಿಂದ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಗೆ ಒಳಗಾಗಿರುವ ಡಾ. ಸೈಯದಾ ಅಂಬ್ರೀನ್ ಅವರು, ಇಂತಹ ಆಚರಣೆಗಳು ಒಬ್ಬ ಮಹಿಳೆಯ ಮೂಲಭೂತ ಘನತೆಗೆ ಧಕ್ಕೆ ಉಂಟುಮಾಡುವುದಲ್ಲದೆ, ಸಮಾನತೆ, ತಾರತಮ್ಯ, ಜೀವನ ಮತ್ತು ಧರ್ಮವನ್ನು ಆಚರಿಸುವ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿವೆ ಎಂದು ಹೇಳಿದ್ದಾರೆ.

    'ಅನೇಕ ಇಸ್ಲಾಮಿಕ್ ರಾಷ್ಟ್ರಗಳು ಇಂತಹ ಆಚರಣೆಗಳನ್ನು ನಿರ್ಬಂಧಿಸಿವೆ, ಆದರೆ, ಸಾಮಾನ್ಯವಾಗಿ ಭಾರತೀಯ ಸಮಾಜ ಮತ್ತು ನಿರ್ದಿಷ್ಟವಾಗಿ ಅರ್ಜಿದಾರರಂತಹ ಮುಸ್ಲಿಂ ಮಹಿಳೆಯರಿಗೆ ಇದು ತೊಂದರೆಯನ್ನುಂಟು ಮಾಡುತ್ತಿದೆ. ಈ ಅಭ್ಯಾಸವು ಅನೇಕ ಮಹಿಳೆಯರು ಮತ್ತು ಅವರ ಮಕ್ಕಳ, ವಿಶೇಷವಾಗಿ ಸಮಾಜದ ದುರ್ಬಲ ಆರ್ಥಿಕ ವರ್ಗಗಳಿಗೆ ಸೇರಿದವರ ಜೀವನಕ್ಕೆ ಹಾನಿಯನ್ನುಂಟುಮಾಡುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

    'ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರದ ವಿಷಯಗಳಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಮತ್ತು ವಿಶೇಷವಾಗಿ ಮುಸ್ಲಿಂ ಮಹಿಳೆಯರ ಘನತೆ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಶಾಸಕಾಂಗವು ವಿಫಲವಾಗಿದೆ. ಕಳೆದ ಕೆಲವು ದಶಕಗಳಿಂದ ನ್ಯಾಯಾಲಯದ ಅವಲೋಕನಗಳ ಹೊರತಾಗಿಯೂ, ಏಕರೂಪ ನಾಗರಿಕ ಸಂಹಿತೆಯು ರೂಪುಗೊಂಡಿಲ್ಲ. ಹೀಗಾಗಿ, ಎಲ್ಲಾ ನಾಗರಿಕರಿಗೆ ವಿಚ್ಛೇದನದ ಏಕರೂಪ ವಿಧಾನದ ಮಾರ್ಗಸೂಚಿ ರೂಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.     Post a Comment

    Previous Post Next Post