ಖಾಯಂಮಾತಿ- ಸಮಾನವೇತನ ಒತ್ತಾಯಿಸಿ " ದಿನಾಂಕ 06-03-2023 ರಂದು ಶಿವಮೊಗ್ಗ ಮಹಾನಗರ ಪಾಲಿಕೆಯ ನೀರು ಸರಬರಾಜು ವಿಭಾಗದ 115 ನೌಕರರು ಕೆಲಸ ಸ್ಥಗಿತ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ"

ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಗುತ್ತಿಗೆ,  ಹೊರ ಗುತ್ತಿಗೆ  ಕಾರ್ಮಿಕರು ಈ ಬಜೆಟ್ ನಲ್ಲಿ ತಮ್ಮ ಸೇವೆಗಳನ್ನು ಖಾಯಂಗೊಳಿಸಲು ಸರ್ಕಾರ ಕ್ರಮ ವಹಿಸುತ್ತದೆ ಎಂಬ ಆಶಾಭಾವನೆ ಮತ್ತು ನಂಬಿಕೆಯನ್ನು ಹೊಂದಿದ್ದೆವು. ಆದರೆ ರಾಜ್ಯದ ನೆರ ಪಾವತಿಯಲ್ಲಿ ದುಡಿಯುತ್ತಿರುವ 24 ಸಾವಿರ ಪೌರ ಕಾರ್ಮಿಕರ ಸೇವೆಗಳನ್ನು ಮಾತ್ರ ಖಾಯಂಗೊಳಿಸುವ ನಿರ್ಧಾರವನ್ನು ಪ್ರಕಟಿಸಿದೆ. ಇದನ್ನು ರಾಜ್ಯ ಸಂಘವು ಸ್ವಾಗತಿಸುತ್ತದೆ. ಆದರೆ ಇತರೆ ಗುತ್ತಿಗೆ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಾರ್ಮಿಕರ ಬಗ್ಗೆ ಯಾವುದೇ ಕ್ರಮ ವಹಿಸದೇ ಇರುವುದು ಮಲತಾಯಿ ಧೋರಣೆ ಮತ್ತು ನ್ಯಾಯ ಸಮ್ಮತವಲ್ಲ ಎಂದು ಅಭಿಪ್ರಾಯ ಪಟ್ಟಿದೆ.

 ಈ ಹಿಂದೆ 2022 ಜುಲೈ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೀರು ಸರಬರಾಜು ಕಾರ್ಮಿಕರು ಜಂಟಿಯಾಗಿ ನಡೆಸಿದ ಮುಷ್ಕರದ ಸಮಯದಲ್ಲಿ ಸರ್ಕಾರವೇ ರಚಿಸಿದ ಸಮಿತಿಯ ಶಿಫಾರಸ್ಸುಗಳು ಸರ್ಕಾರದ ಮುಂದಿದೆ ಅದನ್ನು ಬಹಿರಂಗಗೊಳಿಸಿ ಅದರ ಮೆಲೆ ಸಾರ್ವಜನಿಕ ಚರ್ಚೆ ನಡೆಸಿ ಮುಂದೆ ಸಾಗಬೇಕಾದ ಸರ್ಕಾರ ಏಕ ಪಕ್ಷೀಯವಾಗಿ ನಡೆಯುತ್ತಿರುವುದು ಸರಿಯಲ್ಲ ಎಂದು ರಾಜ್ಯ ಸಂಘವು ಅಭಿಪ್ರಾಯ ಪಟ್ಟಿದೆ.

ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ದುಡಿಯುವ ಎಲ್ಲಾ ಹೊರ ಗುತ್ತಿಗೆ ಆದಾರಿತ ನೀರು ಸರಬರಾಜು ವಿಭಾಗದವರ  ಸೇವೆಗಳನ್ನು ಈ ತಕ್ಷಣದಿಂದ ನೇರ ಪಾವತಿಯಡಿಯಲ್ಲಿ  ತಂದು ಸಮಾನ ವೇತನ ನೀಡಬೇಕು, ನಂತರದಲ್ಲಿ ಹಂತ-ಹಂತವಾಗಿ ಖಾಯಂ ಗೊಳಿಸಲು ಒತ್ತಾಯಿಸಿ ಹಲವು ಹೋರಾಟಗಳನ್ನು ರಾಜ್ಯದ ವಿವಿದೆಡೆಗಳಲ್ಲಿ ನಡೆಸಿ ಮನವಿ ಸಲ್ಲಿಸಲಾಗಿದೆ.

                                                  ಶಿವಮೊಗ್ಗ ಮಹಾನಗರ ಪಾಲಿಕೆ

ದಿ: 20-02-2023 ರಂದು ಸರ್ಕಾರಕ್ಕೆ ಮುಷ್ಕರದ ನೋಟಿಸ್ ನೀಡಿ ಪತ್ರ ತಲುಪಿದ 14 ದಿನದ ಒಳಗೆ ತಾವು ನಮ್ಮ ನ್ಯಾಯಬದ್ದವಾದ ಹಕ್ಕೋತ್ತಾಯಗಳನ್ನು ಪರಿಗಣಿಸದೆ ಹೋದಲ್ಲಿ ನಾವುಗಳು ಕೆಲಸ  ಸ್ಥಗಿತಗೊಳಿಸಿ  ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುತ್ತದೆ ಎಂದು ತಿಳಿಸಲಾಗಿತ್ತು. ಇವರಿಗೆ 8 ದಿನಗಳ ಗತಿಸಿದ್ದರೂ ಸಹಾ ಸರ್ಕಾರವು ಈ ವಿಚಾರವನ್ನು ಗಂಭಿರವಾಗಿ ಪರಿಗಣಿಸದೇ ಇರುವುದು ತುಂಬಾ ಸೋಚನೀಯ ಸಂಗತಿಯಾಗಿದೆ. ಹಾಗಾಗಿ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೀರು ಸರಬರಾಜು  ವಿಭಾಗದ ನೌಕರರು ಅನಿವಾರ್ಯವಾಗಿ ದಿನಾಂಕ 06-03-2023 ರಿಂದ ನೀರು ಸರಬರಾಜು ಬಂದ್ ಮಾಡಿ ಮುಷ್ಕರಕ್ಕೆ ಮುಂದಾಗಲು ನಮ್ಮ ರಾಜ್ಯ ಸಂಘವು ಕರೆಕೊಟ್ಟಂತೆ ನಾವುಗಳು ಸಹಾ ಬೆಂಬಲ ವ್ಯಕ್ತಪಡಿಸುವ ಸಂಬಂಧ ಪ್ರಕಟಣೆಯಲ್ಲಿ ತಿಳಿಸಿದೆ. ಈ ನ್ಯಾಯ ಸಮ್ಮತ ಚಳುವಳಿಯನ್ನು ನಾಗರೀಕ ಸಂಘಟನೆಗಳು ಬೆಂಬಲಿಸಲು ಶಿವಮೊಗ್ಗ ಮಹಾನಗರಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘವು ವಿನಂತಿಸಿದೆ.

ಹಕ್ಕೋತ್ತಾಯಗಳು

1. ಎಲ್ಲಾ ನಗರ ಸ್ಥಳಿಯ ಹೊರ ಗುತ್ತಿಗೆ ಅಡಿಯಲ್ಲಿ ದುಡಿಯುತ್ತಿರುವ ಎಲ್ಲಾ ನೀರು ಸರಬರಾಜು ವಿಭಾಗದ ನೌಕರರ ಸೇವೆಗಳನ್ನು ವಿಶೇಷ ನೇಮಕಾತಿಯಡಿ ಖಾಯಂಗೊಳಿಸಬೇಕು.

2. ಖಾಯಂಗೊಳಿಸುವ ತನಕ ಎಲ್ಲಾ ಗುತ್ತಿಗೆ ನಗರ ಸ್ಥಳಿಯ ಸಂಸ್ಥೆಗಳ ನೀರು ಸರಬರಾಜು ನೌಕರರಿಗೆ ನೇರ ಪಾವತಿಯಡಿಯಲ್ಲಿ ತರಬೇಕು. ಸುಪ್ರಿಂ ಕೋರ್ಟಿನ  ತೀರ್ಪಿನಂತೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ  ನೀಡಬೇಕು.

3. ಎಲ್ಲಾ ಸ್ಥಳಿಯ ಸಂಸ್ಥೆಗಳ ನೀರು ಸರಬರಾಜು ವಿಭಾಗದ ನೌಕರರಿಗೆ ದಿನದಲ್ಲಿ ಎಂಟು ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಕಾನೂನು ಬದ್ದ ವೇತನ, ವಾರದಲ್ಲಿ ಸಂಬಳ ಸಹಿತ ರಜೆ, ರಾಷ್ಠ್ರೀಯ ಹಬ್ಬಗಳ, ಹಬ್ಬಗಳ ರಜೆ, ಗಳಿಕೆ ರಜೆ, ಅನಾರೋಗ್ಯ ರಜೆ, ಹತ್ತಾರು  ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ/ ಮರಣ ಹೊಂದುವ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಾರ್ಮಿಕರು/ ಅವಲಂಬಿತರಿಗೆ ಉಪಧನ ಸ್ಪಷ್ಟವಾದ ಆಧೇಶ ಸರ್ಕಾರ ಹೊರಡಿಸಬೇಕು.

4. ಗುತ್ತಿಗೆದಾರರು ನೌಕರರಿಂದ ಕಟಾಯಿಸಲಾದ ಪಿ.ಎಫ್, ಹಾಗೂ ಇ.ಎಸ್. ಐ ಗಳನ್ನು ಸರಿಯಾಗಿ ಪಾವತಿಸದೇ ಹಲವೆಡೆ ಹಗರಣಗಳು ನಡೆದಿವೆ, ಇದನ್ನು ತಡೆಯಲು ಮೂಲ ಮಾಲಿಕರಾದ ಸ್ಥಳೀಯ ಸಂಸ್ಥೆಗಳೇ ಇದನ್ನು ನಿರ್ವಹಿಸುವಂತೆ ಸಂಘವು ಒತ್ತಾಯಿಸುತ್ತದೆ.

5. ಎಲ್ಲಾ ಹೊರಗುತ್ತಿಗೆ ನೀರು ಸರಬರಾಜು ವಿಭಾಗದ ಕಾರ್ಮಿಕರು ಅಲ್ಪ ವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿ ಒಳಗೊಂಡು ಉಚಿತ ನಿವೇಶನವನ್ನು ನೀಡಬೇಕು.


Post a Comment

Previous Post Next Post