ಪಾಕಿಸ್ತಾನದ ಮಹಿಳೆಗೆ ಮರುಜೀವ ಕೊಟ್ಟ ಬೆಂಗಳೂರಿನ ವೈದ್ಯರು

 ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ಮಹಿಳೆಯೊಬ್ಬರಿಗೆ ಬೆಂಗಳೂರಿನ ವೈದ್ಯರು ಮರುಜೀವ ನೀಡಿದ್ದಾರೆ.

                                                                          ಸಂಗ್ರಹ ಚಿತ್ರ

By : Rekha.M
Online Desk

ಬೆಂಗಳೂರು: ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪಾಕಿಸ್ತಾನದ ಮಹಿಳೆಯೊಬ್ಬರಿಗೆ ಬೆಂಗಳೂರಿನ ವೈದ್ಯರು ಮರುಜೀವ ನೀಡಿದ್ದಾರೆ.

ಪಾಕಿಸ್ತಾನ ಪ್ರಜೆಯಾಗಿರುವ ಆರಿಫಾ ಬಾನೊ (43) ಎಂಬುವವರಿಗೆ ಬೆಂಗಳೂರಿನ ವೈದ್ಯರು ಮರಜೀವ ನೀಡಿದ್ದಾರೆ. ಅರಿಫಾ ಅವರು ಕಳದ 27 ವರ್ಷಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಪಾಕಿಸ್ತಾನದಿಂದ ಬೆಂಗಳೂರಿಗೆ ಬಂದಿದ್ದರು.

ಪಾಕಿಸ್ತಾನದಲ್ಲಿದ್ದ ವೈದ್ಯರು ಅರಿಫಾ ಅವರನ್ನು ಪರೀಕ್ಷೆಗೊಳಪಡಿಸಿದಾಗ ತೆರೆದ ಹೃದಯ ಶಸ್ತ್ರಚಿಕಿತ್ಸೆಗೊಳಗಾಗುವಂತೆ ಸೂಚಿಸಿದ್ದಾರೆ.  ಆದರೆ, ಆರಂಭದಲ್ಲಿ ಅರಿಫಾ ಚಿಕಿತ್ಸೆಗೆ ನಿರಾಕರಿಸಿದ್ದಾರೆ. ನಂತರ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸಲಹೆಗಲ ಮೇರೆಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಲು ನಿರ್ಧರಿಸಿದ್ದಾರೆ.

ಅರಿಫಾ ಅವರಿಗೆ 16ನೇ ವಯಸ್ಸಿನಲ್ಲಿಯೇ ಮಿಟ್ರಲ್ ರಿಗರ್ಗಿಟೇಶನ್ ಇರುವುದು ಪತ್ತೆಯಾಗಿದೆ. ಈ ವೇಳೆ ಕವಾಟದ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಲಾಗಿದೆ. ಸಾಮಾನ್ಯವಾಗಿ ಈ ಸಮಸ್ಯೆಗೆ ತೆರೆದ ಹೃದಯದ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ವೈದ್ಯರ ಸಲಹೆಗಳನ್ನು ನಿರಾಕರಿಸುತ್ತಲೇ ಬರುತ್ತಿದ್ದ ಅರಿಫಾ ಅವರಿಗೆ ನಂತರ ದಿನಗಳಲ್ಲಿ ಉಸಿರಾಟದ ಸಂಮಸ್ಯೆ ಎದುರಾಗಿದೆ. 1.5 ವರ್ಷಗಳಲ್ಲಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಇದು ಅವರ ದೈನಂದಿನ ದಿನಚರಿಯ ಮೇಲೂ ಗಮನಾರ್ಹ ಪರಿಣಾಮ ಬೀರಿದೆ.

ಇದೀಗ ಅರಿಫಾ ಅವರಿಗೆ ನಾರಾಯಣ ಹೃದಯಾಲಯದಲ್ಲಿ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 72 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅರಿಫಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ನಾರಾಯಣ ಹೃದಯಾಲಯದ ಹಿರಿಯ ಸಲಹೆಗಾರ (ಇಂಟರ್ವೆನ್ಷನಲ್ ಕಾರ್ಡಿಯಾಲಜಿ) ಡಾ.ಉದಯ್ ಖಾನೋಲ್ಕರ್ ಅವರು ಹೇಳಿದ್ದಾರೆ.


Post a Comment

Previous Post Next Post