ಯಾದಗಿರಿ: ಸೈದಾಪುರ ಪಟ್ಟಣದಲ್ಲಿ ಬಟ್ಟೆ ಅಂಗಡಿಯಲ್ಲಿ ಬೆಂಕಿ, ದಂಪತಿ ಸಜೀವ ದಹನ

 ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಯ ಜ್ವಾಲೆ ಮನೆಯಿಡೀ ಹೊತ್ತಿಕೊಂಡು ದಂಪತಿ ಸಜೀವ ದಹನವಾಗಿರುವ ದಾರುಣ ಘಟನೆ ಇಂದು ಸೋಮವಾರ ನಸುಕಿನ ಜಾವ ನಡೆದಿದೆ.


By :Rekha.M
Online Desk

ಯಾದಗಿರಿ: ಯಾದಗಿರಿ ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಯ ಜ್ವಾಲೆ ಮನೆಯಿಡೀ ಹೊತ್ತಿಕೊಂಡು ದಂಪತಿ ಸಜೀವ ದಹನವಾಗಿರುವ ದಾರುಣ ಘಟನೆ ಇಂದು ಸೋಮವಾರ ನಸುಕಿನ ಜಾವ ನಡೆದಿದೆ. ಮೃತಪಟ್ಟವರನ್ನು ಸೈದಾಪುರ ಪಟ್ಟಣದ ಖ್ಯಾತ ಬಟ್ಟೆ ಉದ್ಯಮಿ 39 ವರ್ಷದ ರಾಘವೇಂದ್ರ ಮತ್ತು ಅವರ ಪತ್ನಿ 35 ವರ್ಷದ ಶಿಲ್ಪಾ ಎಂದು ಗುರುತಿಸಲಾಗಿದೆ.

ಸೈದಾಪುರ ಪಟ್ಟಣದಲ್ಲಿರುವ ಮೂರು ಮಹಡಿಯ ಮನೆಯಲ್ಲಿ ಕೆಳಮಹಡಿಯಲ್ಲಿ ತಾವು ವಾಸಿಸುತ್ತಿದ್ದು ಮೇಲಿನ ಎರಡು ಮಹಡಿಗಳಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದರು. ಸುಮಾರು 3 ಕೋಟಿ ರೂಪಾಯಿಗಳ ಬಟ್ಟೆ ಇದ್ದವು. ನಿನ್ನೆ ರಾತ್ರಿ ವ್ಯಾಪಾರ ಮುಗಿಸಿ ದಂಪತಿ ಮೇಲಿನ ಮಹಡಿಯಲ್ಲಿಯೇ ಮಲಗಿದ್ದರೆ ಮಕ್ಕಳು ಮತ್ತು ವೃದ್ಧ ತಂದೆ-ತಾಯಿ ಕೆಳಮಹಡಿಯ ಮನೆಯಲ್ಲಿ ಮಲಗಿದ್ದರು.

ಇಂದು ನಸುಕಿನ ಜಾವ ಕೆಳಮಹಡಿಯ ಬಟ್ಟೆ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡು ಕ್ಷಣದಲ್ಲಿಯೇ ಮನೆಯಿಡೀ ವ್ಯಾಪಿಸಿತು. ಮೇಲಿನ ಮಹಡಿಯಲ್ಲಿದ್ದ ದಂಪತಿ ಬೆಂಕಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳಲು ಬಾತ್ ರೂಂನಲ್ಲಿ ಹೋಗಿ ಅಡಗಿ ಕುಳಿತಿದ್ದರು. ಆದರೆ ದಟ್ಟ ಹೊಗೆಯಿಂದಾಗಿ ಉಸಿರುಗಟ್ಟೆ ಮೃತಪಟ್ಟಿದ್ದಾರೆ. ಅವರಿಗೆ ಫೋನ್ ಮಾಡಿ ಹೊರಗೆ ವಿಷಯ ತಿಳಿಸಲು ಸಾಧ್ಯವಾಗಿರಲಿಲ್ಲ. ಬಾತ್ ರೂಂನ ಗೋಡೆಯನ್ನು ಒಡೆಯಲಾಯಿತಾದರೂ ಅಷ್ಟು ಹೊತ್ತಿಗೆ ದಂಪತಿ ಅಸುನೀಗಿದ್ದರು. 

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿತು.Post a Comment

Previous Post Next Post