ಶಿವಮೊಗ್ಗ: ಜೈಲ್ ರಸ್ತೆಯ ಬಳಿ ಮೊಬೈಲ್ ಕದ್ದು ಪುನಃ ಕೊಡುವ ನೆಪದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ; ಆರೋಪಿತರನ್ನು 24 ಗಂಟೆಗಳ ಒಳಗೆ ಪತ್ತೆ ಹಚ್ಚಿದ ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿ ಎಸ್ ಮತ್ತು ತನಿಖಾ ತಂಡ

 ದಿನಾಂಕ 17-03-2023 ರಂದು ಸಂಜೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ  ಜೈಲು ರಸ್ತೆಯ ಬಳಿ ಯಾರೋ ಅಪರಿಚಿತರು ಶ್ರೀ ಚಂದ್ರಶೇಖರ್, 38 ವರ್ಷ, ಮಲ್ಲಾಪುರ ಗ್ರಾಮ ರವರ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಹೋಗಿ, ಮತ್ತೆ ಮೊಬೈಲ್ ಕೊಡುವ ನೆಪದಲ್ಲಿ ಶಿವಮೊಗ್ಗ ನಗರದ ಹೊಸಮನೆಗೆ ಬರಲು ಹಳಿ ಹಣವನ್ನು ಕಿತ್ತು ಹೋಗಿರುತ್ತಾರೆ. ಆನಂತರ ಪುನಃ ಯಾರೋ 05 ಜನ ಅಪರಿಚಿತರು ಬಂದು ಚಂದ್ರಶೇಖರ್ ರವರಿಗೆ ನಿಮ್ಮ ಮೊಬೈಲ್ ಕೊಡಿಸುತ್ತೇವೆ ಬನ್ನಿ ಎಂದು ಹೇಳಿ ಆಟೋದಲ್ಲಿ ಸೋಮೊನಕೊಪ್ಪ ಹತ್ತಿರದ ಖಾಲಿ ಲೇಔಟ್ ಬಳಿ ಕರೆದಿಕೊಂಡು ಹೋಗಿ ಹಲ್ಲೆ ಮಾಡೀ ರಕ್ತಗಾಯ ಪಡಿಸಿ ಎಟಿಎಂ ಕಾರ್ಡ್ ಅನ್ನು ಕಿತ್ತುಕೊಂಡು ಹೀಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ದಿನಾಂಕ 18-03-2023 ರಂದು ಗುನ್ನೆ ಸಂಕ್ಯೆ 52/2023 ಕಲಂ 397 ಐಪಿಸಿ ರೀತ್ಯಾ ಪ್ರಕರಣವನ್ನು ದಾಖಲಿ ಸಿಕೊಳ್ಳಲಾಗಿರುತ್ತದೆ.

ಸದರಿ ಪ್ರಕರಣದಲ್ಲಿ ಕಳುವಾದ ವಸ್ತುಗಳು ಮತ್ತು ಆರೋಪಿತರನ್ನು ಪತ್ತೆ ಹಚ್ಚಲು ಶ್ರೀ ಮಿಥುನ್ ಕುಮಾರ್ ಜಿ.ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತು ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ, ಮಾನ್ಯ ಹೆಚ್ಚುವರು ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀ ಸುರೇಶ್ ಎಂ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪವಿಭಾಗ-ಬಿ ಉಪವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ಸಂಜೀವ್ ಕುಮಾರ ಜೆ ಮಹಾಜನ್, ಪೊಲೀಸ್ ನಿರೀಕ್ಷಕರು, ವಿನೋಬನಗರ ಪೊಲೀಸ್ ಠಾಣೆರವರ ನೇತೃತ್ವದಲ್ಲಿ, ಸುನೀಲ್, ಬಿ.ಸಿ, ಪಿಎಸ್ ಐ, ಟಿಡ಼ಿ ಸಾಗರಕರ್ ಪಿಎಸ್ ಐ ಮತ್ತು ಸಿಬ್ಬಂದಿಗಳಾದ ಸಿಪಿಸಿ ರಾಜು ಕೆ.ಆರ್, ಚಂದ್ರನಾಯ್ಕ ಬಿ, ಮಲ್ಲಪ್ಪ, ಅರುಣ ಕುಮಾರ್ ಎನ್ ಕೆ, ಮೂರ್ತಿ ಮತ್ತು ವಿಜಯ ಕುಮಾರ ಓಲಿ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನಾಂಕ 19-03-2023 ರಂದು ಪ್ರಕರಣದ ಆರೋಪಿತರಾದ ರಾಜು@ ಚೊಟ್ಟ, 29 ವರ್ಷ, ಕಲ್ಲಳಿ ಕಾಶಿಪುರ ಶಿವಮೊಗ್ಗ ಟೌನ್, ಈಶ್ವರ, 28 ವರ್ಷ, ಹೊಸಮನೆ, ಶಿವಮೊಗ್ಗ  ಟೌನ್, ರಾಜು@ ಗುನ್ನಾ, 20 ವರ್ಷ, ಹೊಸಮನೆ, ಶಿವಮೊಗ್ಗ ಟೌನ್, ಮಣಿಕಂಠ ಎ.ಎಲ್, 29 ವರ್ಷ, ಶರಾವತಿನಗರ, ಶಿವಮೊಗ್ಗ ಟೌನ್, ವಿಜಯ್, 25 ವರ್ಷ್,  ಬೊಮ್ಮನಕಟ್ಟೆ ಶಿವಮೊಗ್ಗ ಟೌನ್, ರಘು ಬಿನ್ ಹರೀಶ್ 21 ವರ್ಷ್, ಹೊಸಮನೆ, ಶಿವಮೊಗ್ಗ ಟೌನ್ ದಸ್ತಗಿರಿ ಮಾಡಿ 03 ಜನ ಕಾನೂನು ಸಂಗರ್ಷಕ್ಕೊಳಗಾದ ಬಾಲಕರನ್ನು ಪ್ರಕರಣ ದಾಖಲಾದ 24 ಗಂಟೆಯಗಳ ಒಳಗಾಗಿ ವಶಕ್ಕೆ ಪಡೆದು, ಸದರಿಯವರಿಂದ ವಿನೋಬನಗರ ಪೊಲೀಸ್ ಠಾಣೆಯ 01 ದರೋಡೆ ಮತ್ತು 01 ಸುಲಿಗೆ ಪ್ರಕರನ್ ಸೇರಿ ಒಟ್ಟು 02 ಪ್ರಕರಣಗಲಿಗೆ ಸಂಬಂಧಿಸಿದ 02 ಎಟಿಎಂ ಕಾರ್ಡುಗಳು, ಒಂದು ಮೊಬೈಲ್ ಮತ್ತು ನಗದು ಹನ ರೂ 9.200/- ಅನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ಸದರಿ ತನಿಖಾ ತಂಡವು ಪ್ರಕರಣ ದಾಖಲಾದ 24  ಗಂಟೆಗಳ ಒಳಗಾಗಿ ಆರೋಪಿತರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ್ದು, ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷರು, ಶಿವಮೊಗ್ಗ ಜಿಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ

.

Post a Comment

Previous Post Next Post