ಚುನಾವಣಾ ರ್ಯಾಲಿಗಳಿಗೆ ಸರ್ಕಾರಿ ಬಸ್ ಗಳ ಬುಕ್ಕಿಂಗ್: ದೈನಂದಿನ ಸಾರಿಗೆ ಮೇಲೆ ಪರಿಣಾಮ ಸಾಧ್ಯತೆ, ಪ್ರಯಾಣಿಕರಲ್ಲಿ ಶುರುವಾಯ್ತು ಕಳವಳ

 ಚುನಾವಣಾ ಅಕಾಡಕ್ಕೆ ಕರ್ನಾಟಕ ಅಧಿಕೃತವಾಗಿ ಕಾಲಿಡುತ್ತಿದ್ದು, ರಾಜಕೀಯ ರ್ಯಾಲಿಗಳು, ಚುನಾವಣಾ ಸಂಬಂಧಿತ ಕಾರ್ಯಗಳಿಗೆ ಸಾವಿರಾರು ಸರ್ಕಾರಿ ಬಸ್ ಗಳು ಬುಕ್ ಆಗಲಿವೆ. ಈ ಹನ್ನೆಲೆಯಲ್ಲಿ ದೈನಂದಿನ ಸಾರಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಪ್ರಯಾಣಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

                                                               ಸಂಗ್ರಹ ಚಿತ್ರ

By : Rekha.M
Online Desk

ಬೆಂಗಳೂರು: ಚುನಾವಣಾ ಅಕಾಡಕ್ಕೆ ಕರ್ನಾಟಕ ಅಧಿಕೃತವಾಗಿ ಕಾಲಿಡುತ್ತಿದ್ದು, ರಾಜಕೀಯ ರ್ಯಾಲಿಗಳು, ಚುನಾವಣಾ ಸಂಬಂಧಿತ ಕಾರ್ಯಗಳಿಗೆ ಸಾವಿರಾರು ಸರ್ಕಾರಿ ಬಸ್ ಗಳು ಬುಕ್ ಆಗಲಿವೆ. ಈ ಹನ್ನೆಲೆಯಲ್ಲಿ ದೈನಂದಿನ ಸಾರಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಪ್ರಯಾಣಿಕರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಜನರಿಗೆ ಸೂಕ್ತ ಸೇವೆ ಒದಗಿಸುವು ಸಾರಿಗೆ ನಿಗಮಗಳ ಪ್ರಾಥಮಿಕ ಜವಾಬ್ದಾರಿಯಾಗಿದೆ. ರ್ಯಾಲಿಗಳಿಗ ಬಸ್ ಗಳ ನಿಯೋಜಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗುವಂತೆ ಮಾಡಬಾರದು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯಿದೆ. ಮಾರ್ಚ್ 24 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಕಾರ್ಯಕ್ರಮಕ್ಕೆ ಜನರ ಸೇರಿಸಲು ಬಸ್ ಗಳನ್ನು ಬುಕ್ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿತ್ತು. ಸಾಮಾನ್ಯವಾಗಿ 15 ನಿಮಿಷಗಳ ಅಂತರದಲ್ಲಿ ಬಸ್ ಗಳು ಬರುತ್ತಿತ್ತು. ಆದರೆ, ಮಾ.24ರಂದು ಕೆ.ಆರ್.ಮಾರುಕಟ್ಟೆಗೆ ಬಸ್ಸು ಬರಲು 45 ನಿಮಿಷಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು ಎಂದು ಕುಮಾರಸ್ವಾಮಿ ಲೇಔಟ್‌ನ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ರಾಜಕೀಯ ಕಾರ್ಯಕ್ರಮಗಳಿಗೆ ಆ ಮಾರ್ಗದಲ್ಲಿ ಕನಿಷ್ಠ ನಾಲ್ಕು ಬಸ್‌ಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಎಂದು ಬಸ್ ನಿರ್ವಾಹಕರೊಬ್ಬರು ಹೇಳಿದ್ದಾರೆ.

ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆಯ ಸದಸ್ಯರಾಗಿರುವ ಶಾಹೀನ್ ಶಾಸ ಎಂಬುವವರು ಮಾತನಾಡಿ, ಹೆಚ್ಚಿನ ಸಂಖ್ಯೆಯ ಜನರು ಪ್ರತೀದಿನ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ್ದಾರೆ. ಅವರ ಜೀವನ ಮತ್ತು ಜೀವನವು ಅದರ ಮೇಲೆ ಅವಲಂಬಿತವಾಗಿದೆ. ಈಗಾಗಲೇ ಸಾರಿಗೆಯಲ್ಲಿ ಸಿಬ್ಬಂದಿಗಳ ಕೊರತೆಯಿದೆ. ಇದೀಗ ಬಸ್ ಗಳನ್ನು ರ್ಯಾಲಿಗಳಿಗೆ ನೀಡಿದರೆ, ಜನರಿಗೆ ಸಮಸ್ಯೆಗಳಾಗಲಿದೆ ಎಂದು ಹೇಳಿದ್ದಾರೆ.

"ರಾಜಕೀಯ ಪಕ್ಷಗಳು ಜನರ ಬಗ್ಗೆ ಕಾಳಜಿ ವಹಿಸಿದ್ದೇ ಆದರೆ, ರ್ಯಾಲಿಗಳಿಗೆ ಬಸ್‌ಗಳನ್ನು ಬಾಡಿಗೆಗೆ ಪಡೆಯುವುದನ್ನು ನಿಯಂತ್ರಿಸಬೇಕು ಎಂದು ತಿಳಿಸಿದ್ದಾರೆ.

ದೈನಂದಿನ ಸಾರಿಗೆ ವ್ಯವಸ್ಥೆಗೆ ಸಮಸ್ಯೆಗಳಾಗದಂತೆ ಶೇ.15ರಷ್ಟು ಬಸ್ ಗಳನ್ನು ಬಾಡಿಗೆಗೆ ನೀಡಬಹುದು ಎಂದು ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಆಸನದ ಸಾಮರ್ಥ್ಯವನ್ನು ಲೆಕ್ಕಿಸದೆ ಪ್ರತಿ ಕಿ.ಮೀಗೆ ರೂ.57.50ರಂತೆ ದಿನಕ್ಕೆ ರೂ.11,500 ವೆಚ್ಚದಂತೆ ಬಸ್ ಗಳನ್ನು ಬಾಡಿಗೆಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಎಂಟಿಸಿ ಎಂಡಿ ಸತ್ಯವತಿ ಅವರು ಮಾತನಾಡಿ, ಯಾವುದೇ ಪಕ್ಷಗಳು ಇನ್ನು ಬಸ್ ಗಳನ್ನು ಬುಕ್ಕಿಂಗ್ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.
Post a Comment

Previous Post Next Post