ದಾಳಿ ವೇಳೆ ತುಳಿತದಿಂದ 4 ದಿನಗಳ ಶಿಶು ಸಾವು: ಜಾರ್ಖಂಡ್ ನ 6 ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ

 ಪೊಲೀಸ್ ದಾಳಿಯ ವೇಳೆ ತುಳಿತದಿಂದ ಶಿಶುವೊಂದು ಮೃತಪಟ್ಟಿದ್ದು ಜಾರ್ಖಂಡ್ ನ 6 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

                                             ನವಜಾತ ಶಿಶು (ಸಂಗ್ರಹ ಚಿತ್ರ)

By : Rekha.M
Online Desk

ಜಾರ್ಖಂಡ್: ಪೊಲೀಸ್ ದಾಳಿಯ ವೇಳೆ ತುಳಿತದಿಂದ ಶಿಶುವೊಂದು ಮೃತಪಟ್ಟಿದ್ದು ಜಾರ್ಖಂಡ್ ನ 6 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

ಘಟನೆ ಸಂಬಂಧ 6 ಮಂದಿ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದರೆ, 5 ಮಂದಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. 

ಜಾರ್ಖಂಡ್ ನ ಗಿರಿಡಿಹ್ ನಲ್ಲಿ ಈ ಘಟನೆ ನಡೆದಿದೆ.  4 ದಿನಗಳ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಾಗಿದ್ದು, ಪೊಲೀಸ್ ಅಧಿಕಾರಿಗಳ ಬೂಟಿನ ತುಳಿತಕ್ಕೆ ಒಳಗಾದ ಮಗುವಿನ  ಗುಲ್ಮ (ದೇಹದ ಅಂಗ) ಛಿದ್ರಗೊಂಡಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಬ್ಬರು ವ್ಯಕ್ತಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದಾಗ ಈ ಘಟನೆ ನಡೆದಿದೆ. ಮಗುವಿನ ಅಜ್ಜ ಹಾಗೂ ಇನ್ನೂ ಇತರರ ವಿರುದ್ಧ ಪೊಲೀಸರು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಲು ಹೋಗಿದ್ದರು. 

ಘಟನೆಯ ಬಗ್ಗೆ ಸಿಎಂ ಹೇಮಂತ್ ಸೊರೇನ್ ತನಿಖೆಗೆ ಆದೇಶಿಸಿದ್ದರು.

Post a Comment

Previous Post Next Post