ಬೆಂಗಳೂರು: ದೂರು ಕೊಡಲು ಬಂದ ಮಹಿಳೆಯೊಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್ ಅಸಭ್ಯ ವರ್ತನೆ; ಆಯುಕ್ತರಿಗೆ ವರದಿ ರವಾನೆ

 ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ದೂರು ಕೊಡಲು ಬಂದ ಮಹಿಳೆಯೊಂದಿಗೆ ಚೆಲ್ಲಾಟವಾಡುತ್ತಾ ಮತ್ತು ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ.

                                                           ಸಾಂದರ್ಭಿಕ ಚಿತ್ರ

By : Rekha.M

ಬೆಂಗಳೂರು: ನಗರದ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ದೂರು ಕೊಡಲು ಬಂದ ಮಹಿಳೆಯೊಂದಿಗೆ ಚೆಲ್ಲಾಟವಾಡುತ್ತಾ ಮತ್ತು ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಪೂರ್ಣಗೊಳಿಸಿದ್ದಾರೆ.

ಈ ಸಂಬಂಧ ಯಲಹಂಕ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಆಗ್ನೇಯ ಡಿಸಿಪಿ ಲಕ್ಷ್ಮಿ ಪ್ರಸಾದ್ ಅವರಿಗೆ ವರದಿ ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಮಹಿಳೆಗೆ ನಿರಂತರವಾಗಿ ವಾಟ್ಸಾಪ್‌ನಲ್ಲಿ ಅನಗತ್ಯ ಸಂದೇಶಗಳನ್ನು  ಕಳುಹಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ವಿವರಿಸಿವೆ. ತನ್ನನ್ನು ಪೊಲೀಸ್ ಠಾಣೆಗೆ ಕರೆದ ನಂತರ ಇನ್ಸ್‌ಪೆಕ್ಟರ್ ಡ್ರೈ ಫ್ರೂಟ್ಸ್ ಮತ್ತು ರೂಮಿನ ಕೀ ಕೊಟ್ಟರು ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಸಂತ್ರಸ್ತೆ ಕಳೆದ ತಿಂಗಳು 15 ಲಕ್ಷ ರೂಪಾಯಿ ವಂಚನೆ ಮಾಡಿರುವ ಬಗ್ಗೆ ಕೊಡಿಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಇನ್ಸ್‌ಪೆಕ್ಟರ್ ಆಕೆಯ ಫೋನ್ ನಂಬರ್ ಪಡೆದು ಕೆಲವು ದಿನಗಳ ನಂತರ ಅವರೊಂದಿಗೆ ಚಾಟ್ ಮಾಡಲು ಆರಂಭಿಸಿದರು.
ಆರೋಪಿಯ ವರ್ತನೆಯನ್ನು ಸಹಿಸಲಾಗದ ಕಾರಣ, ಮಹಿಳೆ ಈ ಬಗ್ಗೆ ನ್ಯಾಯವ್ಯಾಪ್ತಿಯ ಡಿಸಿಪಿಗೆ ದೂರು ನೀಡಿದ್ದರು. ಡಿಸಿಪಿ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದು, ತನಿಖೆಯನ್ನು ಕೈಗೆತ್ತಿಕೊಂಡು ವರದಿ ಸಲ್ಲಿಸುವಂತೆ ಎಸಿಪಿಗೆ ಸೂಚಿಸಿದ್ದರು.

ಇದೀಗ ತನಿಖಾ ವರದಿಯನ್ನು ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರಿಗೆ ಕಳುಹಿಸಲಾಗಿದ್ದು, ಆರೋಪಿ ಅಧಿಕಾರಿ ವಿರುದ್ಧ ಕ್ರಮ ಬಾಕಿ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Post a Comment

Previous Post Next Post