ಡಿಸಿ ಕಚೇರಿ ಎದುರು ಆಜಾನ್​: ಬಿಜೆಪಿ ಕಾರಣ ಎಂದ ಕುಮಾರಸ್ವಾಮಿ, ಸರ್ಜಿಕಲ್ ಸ್ಟ್ರೈಕ್ ಗೆ ಸಿದ್ಧ ಎಂದ ಸಿಟಿ ರವಿ

 ಡಿಸಿ ಕಚೇರಿ ಎದುರು ಆಜಾನ್​ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಜಾನ್ ವಿವಾದಕ್ಕೆ ಬಿಜೆಪಿ ಕಾರಣ ಎಂದು ಹೇಳಿದ್ದಾರೆ.

                                                       ಸಿಟಿ ರವಿ ಮತ್ತು ಕುಮಾರಸ್ವಾಮಿ

By :Rekha.M
Online Desk

ಬೆಂಗಳೂರು: ಡಿಸಿ ಕಚೇರಿ ಎದುರು ಆಜಾನ್​ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಜಾನ್ ವಿವಾದಕ್ಕೆ ಬಿಜೆಪಿ ಕಾರಣ ಎಂದು ಹೇಳಿದ್ದಾರೆ.

ಮಂಡ್ಯ ತಾಲೂಕಿನ ಮಾಚಹಳ್ಳಿಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, 'ಇದು ಅತ್ಯಂತ್ಯ ಸೂಕ್ಷ್ಮವಾದ ವಿಚಾರವಾಗಿದೆ. ರಾಜ್ಯದಲ್ಲಿ ಈ ರೀತಿಯ ವಿಚಾರಗಳು ಪ್ರಾರಂಭ ಆಗುವುದಕ್ಕೆ ಬಿಜೆಪಿಯವರು ಕಾರಣರಿದ್ದಾರೆ ಎಂದು ಆರೋಪಿಸಿದರು. ಜೊತೆಗೆ ಇನ್ನೊಂದು ಧರ್ಮದ ಕೆಲ ಕಿಡಿಗೇಡಿಗಳ ಪಾತ್ರವಿದೆ. ಈಶ್ವರಪ್ಪನ ಹೇಳಿಕೆ ಇರಲಿ ಅಥವಾ ಇಲ್ಲಾ ಬಿಜೆಪಿಯವನ ಇನ್ಯಾವನ ಹೇಳಿಕೆಯೇ ಇರಲಿ. ಇವತ್ತು ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು. ಈ ದೇಶ ಈ ರೀತಿಯಾದ ಪ್ರಕರಣದಲ್ಲಿ ಚಿತಾವಣೆ ಮಾಡುವವರೂ ಯಾರೇ ಇರ್ಲಿ ಅಂತವರ ವಿರುದ್ದ ಕಠಿಣವಾದ ಕ್ರಮ ಕೈಗೊಳ್ಳಬೇಕೆಂದು ಎಂದು ಆಗ್ರಹಿಸಿದರು.

ಜಿನ್ನಾ ಮಾನಸಿಕತೆ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ಸಿದ್ಧ: ಸಿ.ಟಿ.ರವಿ
ಬ್ಯಾಡಗಿ ಪಟ್ಟಣದಲ್ಲಿ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಸಿ.ಟಿ ರವಿ ಅವರು, 'ಬಿನ್ ಲಾಡೆನ್ ಥರ ಗುರುತಿಸಿಕೊಂಡರೆ ನಾವು ರೆಡಿ ಇಟ್ಟುಕೊಂಡಿದ್ದೇವೆ. ಸರ್ಜಿಕಲ್ ಸ್ಟ್ರೈಕ್ ಮಾಡಲು ನಾವು ತಯಾರಾಗಿದ್ದೇವೆ. ಬೆಂಕಿ ಹಾಕಲು ಬಂದರೆ ಯೋಗಿ ಆದಿತ್ಯನಾಥ್ ಥರ ಕರ್ನಾಟಕದಲ್ಲಿ ಬುಲ್ಡೋಜರ್ ಚಾಲು ಮಾಡುತ್ತೇವೆ. ಒಂದು ವೇಳೆ ನೀವೂ ಒಸಾಮಾ ಬಿನ್ ಲಾಡೆನ್ ಆಗಿ ಬಂದರೆ ಮಟಾಸ್ ಆಗೋದು ಗ್ಯಾರಂಟಿ. ಜಿನ್ನಾನ ಮನಸ್ಥಿತಿ ಇಟ್ಟುಕೊಂಡು ಸಂಚು ಮಾಡಿದರೆ. ಒಪ್ಪಂದಕ್ಕೆ ಸಹಿ ಹಾಕಲು ಕಾಂಗ್ರೆಸ್​​ ಮತ್ತು ನೆಹರು ಈಗ ಇಲ್ಲ. ಇವತ್ತು ಇರೋದು ಬಿಜೆಪಿ, ಕೇಂದ್ರದಲ್ಲಿ ಮೋದಿ ಇದ್ದಾರೆ. ಹೀಗಾಗಿ ನೀವು ಎಚ್ಚರಿಕೆಯಿಂದ ಯೋಚನೆ ಮಾಡಿ ಎಂದು ಹಿಂದೂ ವಿರೋಧಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಹೊಸ ಮಸೀದಿ‌ ಕಟ್ಟಿ, ನಾವು ಖುಷಿ ಪಡುತ್ತೇವೆ
ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಸಿ.ಟಿ ರವಿ ಅವರು, ಕಾಲ ಎಲ್ಲವನ್ನೂ ನಿರ್ಣಯ ಮಾಡುತ್ತೆ, ಕಾಲ ಎಲ್ಲವನ್ನೂ ನಿರ್ಣಯ ಮಾಡುತ್ತೆ. ಸ್ಪಷ್ಟವಾಗಿ ಹೇಳಿದ್ದೇನೆ, ಹೊಸ ಮಸೀದಿ‌ ಕಟ್ಟಿ, ನಾವು ಖುಷಿ ಪಡುತ್ತೇವೆ. ದೇವಾಲಯ ಒಡೆದು ಮಸೀದಿ ಕಟ್ಟಿ ನಮಾಜ್ ಮಾಡಿದರೆ ಒಳ್ಳೆಯದು ಆಗಲು ಸಾಧ್ಯವೇ‌‌ ಇಲ್ಲ.

ಬಾಂಬ್ ಇಡುವ ಜನ ನಮಗೆ ಬೇಡ
ನಾವು ಮುಸ್ಲಿಂ ವಿರೋಧಿಗಳಲ್ಲ, ಮುಸ್ಲಿಮರಲ್ಲೂ ಒಳ್ಳೆಯವರಿದ್ದಾರೆ. ಬಾಂಬ್ ಇಡುವ ಜನ ನಮಗೆ ಬೇಡ. ಸಂತ ಶಿಶುನಾಳ ಶರೀಫರ ರೀತಿಯ ಜನ ಬಂದರೆ ಬಾರಪ್ಪ ಅಂತ ಪೂಜೆ ಮಾಡುತ್ತೇವೆ. ಕುಕ್ಕರ್ ಬಾಂಬ್ ಹಾಕೋರು, ಬಿನ್ ಲಾಡಿನ್, ದಾವೂದ್ ಇಬ್ರಾಹಿಂ ಅಂತಹವರು ಕೆ.ಜಿ‌ ಹಳ್ಳಿ ಡಿ ಜೆ ಹಳ್ಳಿ ಗಲಾಟೆ ಮಾಡಿದವರು ಡಿ ಕೆ ಬ್ರದರ್ಸ್​. ನೀವು ಇಬ್ರಾಹಿಂ ಸೂತಾರ, ಶಿಶುನಾಳ ಶರೀಫ, ಅಬ್ದುಲ್ ಕಲಾಂ, ಅಬ್ದುಲ್ ಹಮೀದ್ ಆಗಿ ಬಂದರೆ ತಲೆ ಮೇಲೆ ಇಟ್ಟುಕೊಂಡು ಮೆರೆಸುತ್ತೇವೆ ಎಂದು ಹೇಳಿದರು.


Post a Comment

Previous Post Next Post