ಶಿವಮೊಗ್ಗ: ಪಾನ್ ಲಿಂಕ್ ಗೆ 1000 ರೂ. ದಂಡಕ್ಕೆ ಎನ್.ಎಸ್.ಯು. ಐ ಕಾರ್ಯದರ್ಶಿ ಎಚ್.ಎಸ್. ಬಾಲಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾನ್ ಹಾಗೂ ಆಧಾರ್ ಲಿಂಕ್ ಮಾಡಲು 1000 ರೂ ದಂಡ ತೆಗೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಎನ್.ಎಸ್.ಯು. ಐ ರಾಜ್ಯ ಕಾರ್ಯದರ್ಶಿ ಎಚ್.ಎಸ್. ಬಾಲಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿಸಲು ಸೂಚಿಸಿದ್ದು, ಲಿಂಕ್ ಮಾಡಲು ಪ್ರಸ್ತುತ 1000 ರೂ. ದಂಡ ಪಡೆಯಲಾಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರು ಸಾವಿರ ರೂ. ದಂಡ ಪಾವತಿಸುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಆದ್ದರಿಂದ ಕೂದಲೇ  ಕೇಂದ್ರ ಸರ್ಕಾರವು ದಂಡ ರಹಿತವಾಗಿ ಲಿಂಕ್ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಬಡ ಮತ್ತು ಮಧ್ಯಮ ವರ್ಗದ ಜನರು ಹಣಕಾಸು ವಹಿವಾಟು ನಡೆಸುವುದೇ ಕಷ್ಠಕರವಾಗಿದೆ. ಪಾನ್, ಆಧಾರ್ ಹೆಸರಿನಲ್ಲಿ ಸಾರ್ವಜನಿಕರಿಂದ ಇಂದು ಸಾವಿರ ರೂ. ವಸೂಲಿ ಮಾಡಲು ಮುಂದಾಗಿರುವ ಕ್ರಮ ಅತ್ಯಂತ ಖಂಡನೀಯ. ಇದರ ಜತೆಯಲ್ಲಿ ಕೆಲವರು ಐದುನೂರು, ಸಾವಿರ ರೂ. ಗಳನ್ನು ಹೆಚ್ಚುವರಿಯಾಗಿ ವಸೂಲಿ ಮಾಡಿತ್ತಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ದಂಡ ವ್ಯವಸ್ಥೆಯನನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಪಾನ್, ಆಧಾರ್ ಕಾರ್ಡ ಗಳಲ್ಲಿ ದೋಷವಿದ್ದರೆ ಲೊಂಕ್ ಆಗುತ್ತಿಲ್ಲ. ಇದರಿಂದ ಕೂದ ಲಿಂಕ್ ಮಾಡಲು ಸಮಸ್ಯೆ ಆಗುತ್ತಿದೆ. ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲು ಇನ್ನೂ ಕಾಲಾವಕಾಶ ನೀಡಬೇಕು ಹಾಗೂ ದಂದ ತೆಗೆದುಕೊಳ್ಳಬಾರದು. ಬದ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಎನ್.ಎಸ್.ಯು. ಐ ರಾಜ್ಯ ಕಾರ್ಯದರ್ಶಿ ಎಚ್.ಎಸ್. ಬಾಲಾಜಿ ಆಗ್ರಹಿಸಿದ್ದಾರೆ. 

Post a Comment

Previous Post Next Post