ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಮತ್ತು ಕುಟುಂಬದ ಹಿತದೃಷ್ಠಿಯ ಕಾರಣ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಯೋಗ ಶಿಬಿರ.

 ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ  ಅಧಿಕಾರಿ ಸಿಬ್ಬಂದಿಗಳು ಮತ್ತು ಕುಟುಂಬದ ವರ್ಗದವರ ಆರೋಗ್ಯ ಹಿತ ದೃಷ್ಠಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ಶಿವಗಂಗೆ ಯೋಗ ಕೇಂದ್ರ ಕಲ್ಲಹಳಿ ವಿನೋಬ ನಗರದ ಸಹಯೋಗ ದೊಂದಿಗೆ ಯೋಗ ಶಿಭಿರವನ್ನು ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ದಿನಾಂಕ 09-03-2023 ರಿಂದ  15 ದಿನಗಳ ವರೆಗೆ ಹಮ್ಮಿಕೊಂಡಿದ್ದು, ಈ ದಿನ  ದಿನಾಂಕ 09-03-2023 ರಂದು ಬೆಳಗ್ಗೆ ಸದರಿ ಶಿಬಿರವನ್ನು ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು ಶ್ರೀ ರುದ್ರ ಆರಾದ್ಯ, ಶಿವಗಂಗೆ ಯೋಗ ಕೇಂದ್ರ , ಶ್ರೀ ಅನಿಲ್ ಕುಮಾರ್ ಭೂಮರೆಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಉದ್ಘಾಟನೆ ಮಾಡಿದ್ದು, ಸದರಿ ಯೋಗ ಶಿಭಿರದಲ್ಲಿ ಶ್ರೀ ನಿಶೀಮಪ್ಪ ಎನ್ ಹನಕನಹಳಿ, ಡಿಎಆರ್ ಶಿವಮೊಗ್ಗ , ಶ್ರೀ ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ- ಬಿ ಉಪ ವಿಭಾಗ, ಶ್ರೀ ಗಜೇಂದ್ರಪ್ಪ, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ, ಶ್ರೀ ಶಿವಾನಂದ್ ಗುಣದಾಲ್, ಆರ್.ಪಿಐ, ಡಿಎಆರ್ ಶಿವಮೊಗ್ಗ ಮತ್ತು ಶಿವಮೊಗ್ಗ ನಗರದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮತ್ತು ಕುಟುಂಬ ವರ್ಗದವರು  ಭಾಗವಹಿಸಿದ್ದರು.Post a Comment

Previous Post Next Post