ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಮಾರಣಾಂತಿಕ ಹಲ್ಲೆ-ಓರ್ವ ಸಾವು

 


     
 ಶಿವಮೊಗ್ಗದ ಗಡಿಭಾಗದಲ್ಲಿ ಮತ್ತೆ ರೌಡಿಸಂ ಸದ್ದು ಮಾಡಿದೆ. ಚೀಲೂರಿನ ಬೋವಿನ ಕೋವಿಯ ಬಳಿಯಲ್ಲಿ ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲೆ ಬೀಭತ್ಸ ದಾಳಿ ನಡೆದಿದೆ. ಈ ಪೈಕಿ ಆಂಜನೇಯ ಸಾವನ್ನಪ್ಪಿದ್ದು, ಮಧು ಸ್ತಿತಿ ಗಂಭೀರವಿದೆ.                                   

ಇವತ್ತು ಮಧು ಮತ್ತು ಆಂಜನೇಯ ಹಂದಿ ಅಣ್ಣಿ ಕೊಲೆ ಕೇಸಿನಲ್ಲಿ ಕೋರ್ಟ್​ಗೆ ಅಟೆಂಡ್ ಆಗಿ ವಾಪಸ್​ ಬರುತ್ತಿದ್ದರು. ಬೈಕ್​ ನಲ್ಲಿ ಬರುತ್ತಿದ್ದ ಇವರಿಬ್ಬರನ್ನ ಸ್ಕಾರ್ಪಿಯೋ ಗಾಡಿಯೊಂದು ಫಾಲೋ ಮಾಡಿದೆ. ಅಲ್ಲದೆ ಬೋವಿನ ಕೋವಿ ಬಳಿ ಮಧು ಮತ್ತು ಆಂಜನೇಯ ನ ಮೇಲೆ ಮಾರಣಾಂತಿಕ ದಾಳಿ ನಡೆಸಿದೆ. ಈ ವೇಳೆ ಆಂಜನೇಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಹಲ್ಲೆ ಮಾಡಿದ ಗ್ಯಾಂಗ್​ನಲ್ಲಿ ನಾಲ್ಕೈದು ಮಂದಿ ಇದ್ದಾರೆ ಎಂದು ಹೇಳಲಾಗಿದೆ. ಇನ್ನೂ ಸ್ಥಳದಲ್ಲಿ ಒಂದು ಸ್ಕಾರ್ಪಿಯೋ ಪತ್ತೆಯಾಗಿದೆ.

Post a Comment

Previous Post Next Post