ಶಿವಮೊಗ್ಗ: ಪತ್ರಕರ್ತರಿಗೆ ಕಿರುಕುಳ: ಮುಖ್ಯ ಮಂತ್ರಿಗೆ ಮನವಿ.

 ಶಿವಮೊಗ್ಗ ಪತ್ರಕರ್ತರ ಹಾಲಸ್ವಾಮಿ ಅವರಿಗೆ ಕರ್ತವ್ಯಕ್ಕೆ ಅಡ್ದಿಪಡಿಸಿ ಕಿರಿಕುಳ ನೀಡಿರುವ ದಾವಣಗೆರೆ ಎಸ್. ಪಿ. ಸಿ.ಬಿ. ರಿಷ್ಯಂತ ಅವರು ಕ್ಷಮೆ ಕೇಳದಿದ್ದಲ್ಲಿ ಶಿವಮೊಗ್ಗದಲ್ಲಿ ನಡೆವ ಗೃಹ ಸಚಿವರ ಕಾರ್ಯಕ್ರಮ ಬಹಿಷ್ಕ್ರಿಸುವುದಾಗಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ  ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಎಚ್ಚರಿಸಿವೆ. ಶುಕ್ರವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಸಂಘಟನೆಗಳು, ದಿನಾಂಕ  27-02-2023 ರಂದು ಶಿವಮೊಗ್ಗ ಹೊರವಲಯದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ ನಡೆದಿದ್ದು ಸರಿಯಷ್ಟೆ. ಅಂದಿನ ಕಾರ್ಯಕ್ರಮಕ್ಕೆ ಇದ್ದ ಶಿಷ್ಟಾಚಾರಗಳಿಗೆ ಅನಿಸಾರವಾಗಿ ಮಾದ್ಯಮಗಳಿಗೆ ವರದಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ರಾಜ್ಯ ಹಾಗೂ ಶಿವಮೊಗ್ಗದ ವಿವಿದ ಮಾಧ್ಯಮ ಪ್ರತಿನಿಧಿಗಳು ಆಗಮಿಸಿದ್ದರು. ಈ ಸಂದರ್ಭ ಪತ್ರಿಕಾ ವರದಿಗೆ ಬಂದಿದ್ದ ಸ್ಥಳೀಯ ಭಾರತ್ ಟಿ.ವಿ ಸಂಪಾದಕ ಆರ್.ಎಸ್. ಹಾಲಸ್ವಾಮಿ ಎಂಬ ನಮ್ಮ ಸಹೋದ್ಯೋಗಿಗೆ ಅಂದಿನ ಭದ್ರತೆ ಉಸ್ತುವಾರಿ ನೋಡಿಕೊಳ್ಳುತಿದ್ದ ದಾವಣಗೆರೆ ಎಸ್ ಪಿ ಶ್ರೀ ರಿಷ್ಯಂತ್ ಅವರು, ಹಾಲಸ್ವಾಮಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಕ್ಯಾಮೆರಾ ಕಸಿದುಕೊಂದು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ.


ಅಪಾರ ಜನಸಂದಣಿಯಲ್ಲಿ ನೂಕು ನುಗ್ಗಲಾಗಿದ್ದನ್ನು ಚಿತ್ರೀಕರಣ ಮಾಡುತ್ತಿದ್ದ ಅವರನ್ನು ಹಿಡಿದು, ಅಪರಾಧಿಯಂತೆ ಪೊಲೀಸ್ ವಾಹನದಲ್ಲಿ ಕೂಡಿಹಾಕಿದ್ದು, ಮಾತ್ರ ವಲ್ಲದೆ ಮೊಬೈಲ್ ನ ವಿಡಿಯೋ ಡಿಲೀಟ್ ಮಾಡಲಾಗಿದೆ. ಈ ಕೃತ್ಯವನ್ನು ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ತೀವ್ರವಾಗಿ ಖಂಡಿಸುತ್ತದೆ. ಪರ್ತಕರ್ತರಿಗೆ ಮುಕ್ತ ಹಾಗೂ ನ್ಯಾಯ ಸಮ್ಮತ ಕಾರ್ಯನಿರ್ವಹಿಸಲು ಅಡ್ಡಿ ಮಾಡಿರುವ ದಾವಣಗೆರೆ ಎಸ್.ಪಿ ಯವರ ವಿರುಧ್ಧ ಕ್ರಮ ಕೈಗೊಳ್ಳಬೇಕು. ಅವರು ಕೂಡಲೇ ಪತ್ರಕರ್ತ ಸಮೂಹದ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದೇವೆ. ಸಿ.ಬಿ ರಿಷ್ಯಂತ್ ಅವರು ಕೂಡಲೇ ಪತ್ರಕರ್ತ ಸಮೂಹದ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದೇವೆ. ಸಿ.ಬಿ. ರಿಷ್ಯಂತ್ ಅವರು ಆದ ಪ್ರಮಾದಕ್ಕೆ ಕ್ಷಮೆ ಕೋರದಿದ್ದಲ್ಲಿ ಮುಂದಿನ ದಿನಗಳಲ್ಲಿ ಗೃಹ ಸಚಿವರು ಭಾಗವಹಿಸುವ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಎಡಿಸಿ ಡಾ. ಲೋಕೇಶ್ ಅವರು, ಮುಖ್ಯಮಂತ್ರಿಗಳಿಗೆ ಕಳಿಸುವುದಾಗಿ  ತಿಳಿಸಿದರು. ಈ ಸಂದರ್ಭ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ಅಧ್ಯಕ್ಷರ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ. ಶಿವಮೊಗ್ಗ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಹಿರಿಯಪರ್ತಕರ್ತರಾದ ಶೃಂಗೇಶ್, ವೈ.ಕೆ. ಸೂರ್ಯನಾರಾಯಣ, ಆರಗ ರವಿ, ಹೊನ್ನಾಳಿ ಚಂದ್ರಶೇಖರ್, ಶಿ. ಜು ಪಾಶ, ಪಿ. ಜೇಸುದಾಸ್, ವಿ.ಸಿ. ಪ್ರಸನ್ನ, ದತ್ತಾತ್ರೇಯ ಹೆಗಡೆ, ಮೋಹನಕೃಷ್ಣ, ಕಿರಣ್ ಕಂಕಾರಿ, ಭರತ್, ಲಿಯಾಕತ್, ನಾಗರಾಜ್ ಡಿ. ಸಾವಂತ್, ಶಿವಮೊಗ್ಗ ನಾಗರಾಜ್ ಮತ್ತಿತರರು ಹಾಜರಿದ್ದರು.  


Post a Comment

Previous Post Next Post