ದಾರವಾಡ: ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೈ ಕೈ ಮಿಲಾಯಿಸಿದ ಬಿಜೆಪಿ ನಾಯಕರ ಬೆಂಬಲಿಗರು

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಬಿಜೆಪಿ ನಾಯಕರ ಬೆಂಬಲಿಗರು ಘೋಷಣೆ ಕೂಗುವಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿದ ಪ್ರಸಂಗ ನಡೆದಿದೆ.


ಮಾಜಿ ಶಾಸಕ ಎಸ್. ಐ ಚಿಕ್ಕನಗೌಡರ್ ಹಾಗೂ ಎಂ. ಆರ್. ಪಾಟೀಲ್ ಬೆಂಬಲಿಗರ ನಡುವೆ ಜಗಳ ನಡೆದಿದ್ದು ವಿಜಯ ಸಂಕಲ್ಪ ಯಾತ್ರೆಯಲ್ಲಿ ತಮ್ಮ ತಮ್ಮ ನಾಯಕರ ಪರ ಘೋಷಣೆ ಕೂಗುವ ವೇಳೆ ಕೈ ಕೈ ಮಿಲಾಯಿಸಿದ್ದಾರೆ. ಯಾತ್ರೆ ವೇಳೆ ನಾಯಕರ ಮುಂದೆಯೇ ಬೆಂಬಲಿಗರು ಕಿತ್ತಾಡಿಕೊಂಡಿದ್ದಾರೆ, ಮಾಜಿ ಶಾಸಕ ಎಸ್ ಐ ಚಿಕ್ಕನಗೌಡ್ರು, ಹಾಗೂ ಎಂ ಆರ್ ಪಾಟೀಲ್ ಈ ಇಬ್ಬರು ನಾಯಕರು ಕುಂದಗೋಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ನಂತರ ಪೊಲೀಸರು ಬಂದು ಗಲಾಟೆ ತಿಳಿಗೊಳಿಸಿದರು.

Post a Comment

Previous Post Next Post