ತೀರ್ಥಹಳ್ಳಿ :ಬಿಜೆಪಿ ಇಂದ ಪ್ರತಿಭಟನಾ ಮೆರವಣಿಗೆ

 
 ಜೈನ ಧರ್ಮದ ಗುರುಗಳಾದ ಚಿಕ್ಕೋಡಿಯ ಶ್ರೀ ಕಾಮಕುಮಾರ ಮಹಾಮುನಿಗಳನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಹಾಗೂ  ಹನುಮಜಯಂತಿಯಲ್ಲಿ ಭಾಗವಹಿಸಿದ್ದನೆಂಬ ಕಾರಣಕ್ಕೆ  ಟಿ.ನರಸೀಪುರದ ಯುವಬ್ರಿಗೇಡ್ ಕಾರ್ಯಕರ್ತರಾದ ವೇಣುಗೋಪಾಲ್ ರನ್ನು  ಅತ್ಯಂತ ಹೀನಾಯವಾಗಿ ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ!. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಇಂದು *ತೀರ್ಥಹಳ್ಳಿ ಮಂಡಲ ಬಿಜೆಪಿ  ವತಿಯಿಂದ* ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ತೀರ್ಥಹಳ್ಳಿ ಪಟ್ಟಣದಾದ್ಯಂತ ಪ್ರತಿಭಟನಾ ಮೆರವಣಿಗೆ ಸಂಚರಿಸಿ, ತಾಲೂಕು ಕಚೇರಿಗೆ ತೆರಳಿ ಸರ್ಕಾರದ ಈ  ವಿರುದ್ಧ ತೀವ್ರವಾಗಿ ಖಂಡಿಸಲಾಯಿತು. ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಲಾಯಿತು. Post a Comment

Previous Post Next Post