ಶಿವಮೊಗ್ಗ: ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯುಸುತ್ತಿದ್ದ ವಾಹನ ಸವಾರರಿಂದ 1000 ಹಾಫ್ ಹೆಲ್ಮೆಟ್ ಹೆಚ್ಚು ವಶ.

 


ದಿನಾಂಕ 25/07/2023 ರಂದು ಶ್ರೀ ಸಂತೋಷ್, ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಸಂಚಾರ ವೃತ್ತ ರವರ ನೇತೃತ್ವದಲ್ಲಿ, ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿಗಳು ಶಿವಮೊಗ್ಗ ನಗರದಲ್ಲಿ ವಿಶೇಷ ಕಾರ್ಯಾಚರಣೆಯ ಮುಖಾಂತರ ಐಎಸ್ ಐ ಪ್ರಮಾಣಿತವಲ್ಲದ ಹಾಫ್ ಹೆಲ್ಮೆಟ್   ಧರಿಸಿ ದ್ವಿ ಚಕ್ರ ವಾಹನ ಚಲಾಯಿಸುತ್ತಿದ್ದ ವಾಹನ ಸವಾರರನ್ನು ತಡೆದು, ಒಟ್ಟು 1000 ಕ್ಕೂ  ಹೆಚ್ಚು ಐಎಸ್ ಐ ಪ್ರಮಾಣಿತವಲ್ಲದ ಹಾಫ್ ಹೆಲ್ಮೆಟ್ ಗಳನ್ನು ವಶಪಡಿಸಿಕೊಂಡು, ವಾಹನ ಸವಾರರಿಗೆ ಐಎಸ್ ಐ ಪ್ರಮಾಣಿತವಲ್ಲದ ಹಾಫ್ ಹೆಲ್ಮೆಟ್ ಆಗುವ ದುಷ್ಪರಿಣಾಮಗಳ ಬಗ್ಗೆ ಮತ್ತು ಐಎಸ್ ಐ ಪ್ರಮಾಣಿತ ಹೆಲ್ಮೆಟ್ ಗಳನ್ನು ಧರಿಸುವುದರಿಂದಾಗುವ ಉಪಯೋಗಗಳ ಕುರಿತಂತೆ ಪ್ರಾತ್ಯಕ್ಷಿಕೆ ನೀಡುವ ಮೂಲಕ ಜಾಗೃತಿ ಮೂಡಿಸಿದರು. 

ಮುಂದಿನ ದಿನಗಳಲ್ಲಿ  ಹಾಫ್ ಹೆಲ್ಮೆಟ್  ವಾಹನ ಚಲಾಯಿಸುವವರ ವಿರುದ್ದ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ  ಕ್ರಮ ಕೈಗೊಳ್ಳಲಾಗುವುದು.


Post a Comment

Previous Post Next Post