ಶಿವಮೊಗ್ಗ :ನಗರದ ದೇವಂಗಿ ಲೇಔಟ್ ನಲ್ಲಿ ವ್ಯಕ್ತಿಯೊಬ್ಬನು ನಿಂತುಕೊಂಡು ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ


    

 ದಿನಾಂಕಃ 07-07-2023 ರಂದು ಬೆಳಗ್ಗೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೀರ್ತಿ ನಗರದ ದೇವಂಗಿ ಲೇಔಟ್ ನಲ್ಲಿ ವ್ಯಕ್ತಿಯೊಬ್ಬನು ನಿಂತುಕೊಂಡು ಸಾರ್ವಜನಿಕರಿಗೆ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ *ಶ್ರೀ ಸುರೇಶ್* ಪೊಲೀಸ್ ಉಪಾಧಿಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, *ಕು. ಬಿಂದುಮಣಿ ಆರ್ ಐಪಿಎಸ್ (ಪ್ರೊ)* ವಿನೋಬನಗರ ಪೊಲೀಸ್ ಠಾಣಾ ಪ್ರಭಾರ ರವರ ನೇತೃತ್ವದ ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಗಾಂಜಾ ಮಾರಾಟ ಮಾಡುತ್ತಿದ್ದ *ಆರೋಪಿ ಮನೋಜ್ 21 ವರ್ಷ, ನರಸಾಪುರ ಗ್ರಾಮ ಕೋಲಾರ* ಈತನನ್ನು ವಶಕ್ಕೆ ಪಡೆದು, ಆರೋಪಿತನಿಂದ *ಅಂದಾಜು ಮೌಲ್ಯ 30,000/- ರೂಗಳ 1 ಕೆಜಿ 105 ಗ್ರಾಂ ತೂಕದ ಒಣ ಗಾಂಜಾ, 200/- ನಗದು ಹಣ ಮತ್ತು ಮೊಬೈಲ್ ಫೋನ್ ಅನ್ನು* ಅಮಾನತ್ತು ಪಡಿಸಿಕೊಂಡು ಆರೋಪಿತನ ವಿರುದ್ಧ ಗುನ್ನೆ ಸಂಖ್ಯೆ 0123/2023 ಕಲಂ NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ 

Post a Comment

Previous Post Next Post