ಶಿವಮೊಗ್ಗ : ಲೈಂಗಿಕ ಕಿರುಕುಳ.ಹತ್ತು ವರ್ಷ ಕಠಿಣ ಕಾರವಾಸ ಶಿಕ್ಷೆ


  2022ನೇ ಸಾಲಿನಲ್ಲಿ *ಭದ್ರಾವತಿ ತಾಲ್ಲೂಕಿನ 22 ವರ್ಷದ ವ್ಯಕ್ತಿಯೊಬ್ಬನು, 17  ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ* ನೀಡಿರುತ್ತಾನೆಂದು ನೊಂದ ಬಾಲಕಿಯು ನೀಡಿದ ದೂರಿನ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 


            ಪ್ರಕರಣದಲ್ಲಿ ತನಿಖಾಧಿಕಾರಿಗಳಾದ *ಶ್ರೀ ಜಿತೇಂದ್ರ ಕುಮಾರ್ ದಯಾಮ, ಐಪಿಎಸ್, ಹಿರಿಯ ಸಹಾಯಕ  ಪೊಲೀಸ್ ಅಧೀಕ್ಷಕರು,* ಭದ್ರಾವತಿ ಉಪ  ವಿಭಾಗ ರವರು ತನಿಖೆ ಕೈಗೊಂಡು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.  


         ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ *ಶ್ರೀ ಹರಿಪ್ರಸಾದ್* ರವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದು, *The Addl District and Sessions Court, FTSC–II (POCSO) Shivamogga* ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರು ದಿನಾಂಕ: 14-07-2023 ರಂದು *ಆರೋಪಿತನಿಗೆ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 1,50,000 /- ರೂ ದಂಡ, ದಂಡಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 06 ತಿಂಗಳು ಸಾಧಾ ಕಾರಾವಾಸ ಶಿಕ್ಷೆ* ವಿಧಿಸಿ  ಆದೇಶ ನೀಡಿರುತ್ತಾರೆ.

Post a Comment

Previous Post Next Post