ಹೊಳೆ ಹೊನ್ನೂರು ಜಂಬ್ರಕಟ್ಟೆ ಗ್ರಾಮಧ ಕಳ್ಳತನ ಪ್ರಕರಣ

     ದಿನಾಂಕ: 16-06-2023 ರಂದು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ *ಜಂಬರಗಟ್ಟೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ* ಬಾಗಿಲಿಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ಮುರಿದು ಹುಂಡಿಯಲ್ಲಿದ್ದ *ಹಣ ಮತ್ತು ಬಂಗಾರ, ಬೆಳ್ಳಿಯ ಆಭರಣಗಳನ್ನು ಕಳ್ಳತನ* ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0144/2023 ಕಲಂ 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. 
          ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆ ಬಗ್ಗೆ *ಶ್ರೀ ಜಿ. ಕೆ ಮಿಥುನ್ ಕುಮಾರ್, ಐಪಿಎಸ್* ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಮತ್ತು *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, *ಶ್ರೀ, ಜಿತೇಂದ್ರ ಕುಮಾರ್ ದಯಾಮ* ಐಪಿಎಸ್, ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕರು ಭದ್ರಾವತಿ ಉಪವಿಭಾಗ ರವರ  ಮೇಲ್ವಿಚಾರಣೆಯಲ್ಲಿ *ಹೊಳೆಹೊನ್ನೂರು ಠಾಣಾ ನಿರಿಕ್ಷಕರಾದ ಶ್ರೀ ಆರ್ ಎಲ್ ಲಕ್ಷ್ಮೀಪತಿ* ರವರ ನೇತೃತ್ವದಲ್ಲಿ, ಪಿ.ಎಸ್.ಐ ಶ್ರೀ ಸುರೇಶ್, ಪಿಎಸ್ಐ ರಮೇಶ್ ಹಾಗೂ ಸಿಬ್ಬಂದಿಗಳಾದ ಹೆಚ್.ಸಿ ಲಿಂಗೇಗೌಡ, ಮಂಜುನಾಥ, ಪಿಸಿ ವಿಶ್ವನಾಥ, ಚಂದ್ರಶೇಖರ್,  ಮೆಹಬೂಬ್ ಬಿಲ್ಲಳ್ಳಿ ಮತ್ತು ಸುದರ್ಶನರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. 


        ಸದರಿ ತನಿಖಾ ತಂಡವು ದಿನಾಂಕ: 07-07-2023 ರಂದು ಆರೋಪಿತರಾದ *1)ರಘು @ ಚಿನ್ನು @ ಡಿ.ಜೆ, 26 ವರ್ಷ, ಬುಳ್ಳಾಪುರ ಗ್ರಾಮ, ಹೊನ್ನಾಳಿ ತಾ|| ದಾವಣಗೆರೆ ಜಿಲ್ಲೆ ಮತ್ತು 2) ಮಣಿಕಂಠ @ ಮಣಿ, 26 ವರ್ಷ, ತರಗನಹಳ್ಳಿ ಗ್ರಾಮ ಶಿವಮೊಗ್ಗ ರವರುಗಳನ್ನು ದಸ್ತಗಿರಿ ಮಾಡಿ,* ಸದರಿ ಆರೋಪಿತರಿಂದ  ಹೊಳೆಹೊನ್ನೂರು ಠಾಣೆಯ 03, ಶಿವಮೊಗ್ಗ ಗ್ರಾಮಾಂತರ ಠಾಣೆಯ 01, ಹಾವೇರಿ ರಟ್ಟೆಹಳ್ಳಿ ಠಾಣೆಯ 03, ದಾವಣಗೆರೆ ಹೊನ್ನಾಳಿ ಠಾಣೆಯ 01, ಚನ್ನಗಿರಿ ಠಾಣೆಯ 01, ಸಂತೆಬೆನ್ನೂರು ಠಾಣೆಯ 01 ಪ್ರಕರಣ ಸೇರಿದಂತೆ *ಒಟ್ಟು 12 ದೇವಸ್ಥಾನ ಕಳ್ಳತನ ಪ್ರಕರಣಗಳು ಮತ್ತು ಚಿಕ್ಕಮಗಳೂರು ತರೀಕೆರೆ ಠಾಣೆಯ 01 ಬೈಕ್ ಕಳ್ಳತನ ಪ್ರಕರಣ ಸೇರಿ ಒಟ್ಟು 13 ಪ್ರಕರಣಗಳಿಗೆ* ಸಂಬಂಧಿಸಿದ ಅಂದಾಜು ಮೌಲ್ಯ 32,000/- ರೂಗಳ ಬೆಳ್ಳಿ ಮತ್ತು ಬಂಗಾರದ ಆಭರಣಗಳು ಹಾಗೂ ಅಂದಾಜು ಮೌಲ್ಯ 40,000/- ರೂಗಳ 02 ದ್ವಿ ಚಕ್ರ ವಾಹನ ಸೇರಿದಂತೆ *ಒಟ್ಟು 72,000/- ರೂ ಮೌಲ್ಯದ ಮಾಲನ್ನು* ಅಮಾನತ್ತು ಪಡಿಸಿಕೊಂಡು,  ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತಾರೆ 

Post a Comment

Previous Post Next Post