ಕೃಷ್ಣ ಕೆಫೆ ಬಳಿ ಇರುವ ಇಂದಿರಾ ಕ್ಯಾಂಟಿನ್ ಅವ್ಯವಸ್ಥೆ! ಜಿಲ್ಲಾ ಕಾಂಗ್ರೆಸ್ ನಿಯೋಗದ ಭೇಟಿ.

ಶಿವಮೊಗ್ಗ  ನಗರದ ಕೃಷ್ಣ ಕೆಫೆ ಬಳಿ ಇರುವ ಇಂದಿರಾ ಕ್ಯಾಂಟಿನ್ ಗೆ ಕಾಂಗ್ರೆಸ್ ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ವೇಳೆ  ಇಂದಿರಾ ಕ್ಯಾಂಟಿನ್ ಅವ್ಯವಸ್ಥೆ ನೋಡಿ ಬೆಚ್ಚಿಬಿದ್ದರು. ಶಿವಮೊಗ್ಗ ಇಂದಿರಾ ಕ್ಯಾಂಟಿನ್ ಗೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸುಂದರೇಶ್ ಅವರ ನಿಯೋಗ ಭೇಟಿ ನೀಡಿ ಪರಿಶೀಲಿಸಲಾಯಿತು. ಈ ವೇಳೆ ಇಂದಿರಾ ಕ್ಯಾಂಟಿನ್ ಸ್ವಚ್ಛತೆ ಕುರಿತು ಪರಿಶೀಲಿಸಿದಾಗ ಹಲವಾರು ನ್ಯೂನತೆಗಳು ಕಂಡುಬಂದಿದ್ದು ಇದು ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಎಂದು ತಿಳಿಸಿದರು.

ಸರಿಯಾದ ಉತ್ತಮ ಗುಣಮಟ್ಟದ ಆಹಾರ ಸಿಗುತ್ತಿಲ್ಲ ಹಾಗೂ ಕಟ್ಟಡ ಹಾನಿಯಾಗಿದ್ದು ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆಹಾರ ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ ಹಾಗೂ ಅವ್ಯವಸ್ಥೆಯ ಕುರಿತು ಪಾಲಿಕೆ ಆಯುಕ್ತರೊಂದಿಗೆ ಮಾತನಾಡಿದ್ದೇನೆ, ನಿರ್ವಹಣೆಗೆ 12 ಲಕ್ಷ ರೂ ನೀಡಲಾಗುತ್ತಿದೆ ಎಂದು ತಿಳಿಸಿದರು. ಇನ್ನೊಂದು ವಾರದಲ್ಲಿ ರಿಪೇರಿ ಆಗಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಈ ವೇಳೆ ಭಾಗಿಯಾಗಿದ್ದರು.  

Post a Comment

Previous Post Next Post