ಚಂದ್ರಯಾನ ಕುರಿತು ಕುತುಹಲಕಾರಿ ಸಂಕ್ಷಿಪ್ತ ಮಾಹಿತಿ.!


ಶ್ರೀಹರಿಕೋಟ (ಆಂಧ್ರ ಪ್ರದೇಶ): ಇಸ್ರೊ ಸಂಸ್ಥೆಯ ಬಹುನಿರೀಕ್ಷಿತ ಉಡಾವಣೆ ಚಂದ್ರಯಾನ-3  ಯಶಸ್ವಿಯಾಗಿ ಉಡಾವಣೆಗೊಂಡು ನಿಗದಿತ ಕಕ್ಷೆಗೆ ಸೇರ್ಪಡೆಯಾಗಿದೆ.

ಭಾರತ ಚಲ ಬಿಡದ ತ್ರಿವಿಕ್ರಮನಂತೆ ಮತ್ತೊಮ್ಮೆ ಚಂದ್ರನತ್ತ ಹೊರಟಿದೆ ಇಡೀ ಪ್ರಪಂಚವೇ ಭಾರತವನ್ನು ಒಂದು ಕ್ಷಣ ತಿರುಗಿ ನೊಡುತ್ತಿದೆ. ಚಂದ್ರಯಾನದ ಅಂಗಳಕ್ಕೆ ಇಳಿದೆ ಇಳಿಯುತ್ತೇವೆ ಎಂಬ ಕೌತುಕ ಇಸ್ರೋ ವಿಜ್ಞಾನಿಗಳದ್ದು. ಬಲಿಷ್ಟ ದೇಶಗಳೇ ಮಾಡಿರದ ಚಂದ್ರಯಾನ  ಭಾರತ ದೇಶವು ಮಾಡಿ ಎಲ್ಲರೂ ಹೆಮ್ಮೆ ಪಡುವಂತೆ ಮಾಡಿದೆಏನಿದು ಚಂದ್ರಯಾನದ ಉದ್ದೇಶ?: 6 ವಾರಗಳ ಕಾಲ ಬಾಹ್ಯಾಕಾಶದಲ್ಲಿ ಸುತ್ತಾಟ ನಡೆಸಿ ಆಗಸ್ಟ್ ಅಂತ್ಯಕ್ಕೆ ಲ್ಯಾಂಡಿಂಗ್ ಆಗುವುದು ಕಾರ್ಯಾಚರಣೆಯ ಉದ್ದೇಶ. ಸಾಫ್ಟ್ ಲ್ಯಾಂಡಿಂಗ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಇಸ್ರೋದಲ್ಲಿನ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC) ನಿರ್ದೇಶಕ ಡಾ ವಿ ನಾರಾಯಣನ್ ಅವರು ಚಂದ್ರಯಾನ-3 ಅತ್ಯಂತ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಆಗಿ ಮುಂದಿನ ಗಗನಯಾನ ಕಾರ್ಯಕ್ರಮವನ್ನು ಆರಂಭಿಸುತ್ತೇವೆ ಎಂದಿದ್ದಾರೆ. 

ಚಂದ್ರಯಾನ3  ಆಗಸ್ಟ್ 23 ರಂದು ಚಂದ್ರನ ಅಂಗಳದಲ್ಲಿ ಇಳಿಯಲಿದೆ. ಇದು ಭಾರತಕ್ಕೆ ಮಹತ್ವದ ಯೋಜನೆಯಾಗಿದೆ. ನಾವು ಮೊದಲ ಬಾರಿಗೆ ಸಾಫ್ಟ್ ಲ್ಯಾಂಡಿಂಗ್ ಮಾಡಲಿದ್ದೇವೆ ಎಂಬ ವಿಶ್ವಾಸ ನಮಗಿದೆ ಎನ್ನುತ್ತಾರೆ ಡಾ ನಾರಾಯಣ. 

ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ನ್ನು ಹೊಂದಿದೆ. ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ತೂಗುತ್ತದೆ. 

ಚಂದ್ರನು ಭೂಮಿಯ ಗತಕಾಲದ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ. ಭಾರತದ ಯಶಸ್ವಿ ಚಂದ್ರನ ಕಾರ್ಯಾಚರಣೆಯು ಭೂಮಿಯ ಮೇಲಿನ ಜೀವನವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಸೌರವ್ಯೂಹದ ಉಳಿದ ಭಾಗಗಳನ್ನು ಮತ್ತು ಅದರಾಚೆಗೆ ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.

ಆಂದ್ರ ಪ್ರದೇಶದ  ಶ್ರೀ ಹರಿಕೋಟದ ಸತೀಶ್ ಧವನ್  ಬಾಹ್ಯಾಕಾಶ ಕೇಂದ್ರ  43.5 ಮೀಟರ್ ಉದ್ದವಿರುವ ಜಿಎಸ್ ಎಲ್ ವಿ ರಾಕೆಟ್ . ಭೂಮಿಯಿಂದ ಚಂದ್ರನ ದೂರ 3,84,000 ಕೀ. ಮೀ. ಗಳಿದೆ. ಚಂದ್ರನ ಬಳಿ ತಲುಪಲು 42 ದಿನಗಳು. ಇದರ ವೆಚ್ಚ 615 ಕೋಟಿ ಗಳಷ್ಟಾಗಿದೆ.

ಚಂದ್ರಯಾನದ ನೌಕೆಯಲ್ಲಿ ಒಟ್ಟು ಮೂರು ಭಾಗಗಳಿರುತ್ತವೆ ಫ್ರೋಫಲ್ಷನ್, ಲ್ಯಾಂಡರ್ ಮತ್ತು ರೋವರ್ .

"ಫ್ರೊಫೆಲ್ಷನ್ ಮ್ಯಾಡುಲ್",  ಲ್ಯಾಂಡರ್ ಹಾಗೂ ರೋವರ್ ಕೊಂಡೊಯ್ಯಲಿದ್ದು ಇದರ ತೂಕ 2148 ಕೆಜಿ ಲ್ಯಾಂಡರ್ ರೋವರ್ ಅನ್ನು ಚಂದ್ರನ ಮೇಲಿರುವ ನೂರು ಕೀ ಮೀ ಕಕ್ಷೆಯನ್ನು ತಲುಪಿಸುತ್ತದೆ.  

"ಲ್ಯಾಂಡರ್" ರೋವರ್ ಅನ್ನು ಚಂದ್ರನ ಮೇಲ್ಮೈ ಭಾಗವನ್ನು ತಲುಪಿಸಿ ರೋವರ್ ನನ್ನು  ಚಂದ್ರನ ಮೇಲೆ ಇಳಿಯುವಂತೆ ಮಾಡುತ್ತದೆ. ಇದರ ತೂಕ ಸರಿಸುಮಾರು 1728 ಕೆಜಿ  ಗಳಿಷ್ಟಿದೆ.

"ರೋವರ್" ಚಂದ್ರನ ದಕ್ಷಿಣ ದ್ರುವ ಮೇಲ್ಮೈ ಭಾಗ ಇಳಿದ ನಂತರ ಚಂದ್ರನಲ್ಲಿ ರುವ ಖನಿಜ, ನೀರು ಹಾಗೂ ಕೆಲವು ವೈಜ್ಞಾನಿಕ ಅನ್ವೇಷಣೆ ಗಳನ್ನು ಅಧ್ಯಯನ ಮಾಡಲಿದ್ದು ಇದರ ತೂಕ ಸರಿಸುಮಾರು 26 ಕೆಜಿ. ರೋವರ್ ನ  ಲ್ಯಾಂಡಿಗ್ ದಿನಾಂಕ 23-08-2023/24 ರದ್ದು ಆಗುತ್ತದೆ ಎಂದು ವಿಜ್ಞಾನಿಗಳು ಖಚಿತ ಪಡಿಸಿದ್ದಾರೆ.


Post a Comment

Previous Post Next Post