ಮಡಿಕೇರಿ: ರ‍್ಯಾಗಿಂಗ್ ಬೇಸತ್ತು 13 ವರ್ಷದ ಬಾಲಕಿ ಆತ್ಮಹತ್ಯೆ

 ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್  ನಿಂದ ಬೇಸತ್ತ  7ನೇ ತರಗತಿಯ ವಿದ್ಯಾರ್ಥಿನಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು  ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಹಳ್ಳಿ ಗ್ರಾಮದಲ್ಲಿ ನಡೆದಿದೆ.

                                                ಆತ್ಮಹತ್ಯೆ ಮಾಡಿಕೊಂಡ ವೈಷ್ಣವಿ

By :Rekha.M
Online Desk

ಮಡಿಕೇರಿ: ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್  ನಿಂದ ಬೇಸತ್ತ  7ನೇ ತರಗತಿಯ ವಿದ್ಯಾರ್ಥಿನಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು  ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವರಹಳ್ಳಿ ಗ್ರಾಮದ ಜಿತೇಂದ್ರ-ಅಕ್ಷತಾ ದಂಪತಿಯ ಪುತ್ರಿ ವೈಷ್ಣವಿ (13) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಸೊಮವಾರಪೇಟೆಯ ಖಾಸಗಿ ಶಾಲೆಯಲ್ಲಿ  7ನೇ ತರಗತಿ ಓದುತ್ತಿದ್ದ ವೈಷ್ಣವಿಗೆ ಕಳೆದ ಒಂದು ವಾರದ ಹಿಂದೆ ರ‍್ಯಾಗಿಂಗ್  ಮಾಡಲಾಗಿತ್ತು, ಇದರಿಂದ  ಖಿನ್ನತೆಗೊಳಗಾಗಿದ್ದ ಆಕೆ ಶನಿವಾರ ರಾತ್ರಿ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ .

ರ‍್ಯಾಗಿಂಗ್  ಬಗ್ಗೆ ಪೋಷಕರಿಗೆ ವಿಷಯ ತಿಳಿಸಿದ್ದ ವೈಷ್ಣವಿ ಶಾಲೆಯಲ್ಲಿ ಈ ಬಗ್ಗೆ ಯಾರಿಗೂ ಮಾಹಿತಿ  ನೀಡಿರಲಿಲ್ಲ ಎಂದು ತಿಳಿದು ಬಂದಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದೆ.


Post a Comment

Previous Post Next Post