ದೆಹಲಿ ಮೂಲದ ಆಫ್ರಿಕನ್ ಗ್ಯಾಂಗ್ ವೊಂದು ಭಾರತದ ದುರ್ಬಲ ವ್ಯಕ್ತಿಗಳನ್ನು ವಿಶೇಷವಾಗಿ ಈಶಾನ್ಯ(ಎನ್‌ಇ) ರಾಜ್ಯಗಳಿಗೆ ಸೇರಿದ ವ್ಯಕ್ತಿಗಳನ್ನು ಅಕ್ರಮವಾಗಿ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳನ್ನು ಕಳ್ಳಸಾಗಣೆ ಮಾಡಲು...
ಸಾಂದರ್ಭಿಕ ಚಿತ್ರಬೆಂಗಳೂರು: ದೆಹಲಿ ಮೂಲದ ಆಫ್ರಿಕನ್ ಗ್ಯಾಂಗ್ ವೊಂದು ಭಾರತದ ದುರ್ಬಲ ವ್ಯಕ್ತಿಗಳನ್ನು ವಿಶೇಷವಾಗಿ ಈಶಾನ್ಯ(ಎನ್‌ಇ) ರಾಜ್ಯಗಳಿಗೆ ಸೇರಿದ ವ್ಯಕ್ತಿಗಳನ್ನು ಅಕ್ರಮವಾಗಿ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ನೇಮಿಸಿಕೊಳ್ಳುತ್ತಿರುವ ದಂಧೆಯನ್ನು ಬೆಂಗಳೂರಿನ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಪತ್ತೆ ಮಾಡಿದೆ.
ನಂಬಲರ್ಹ ಮಾಹಿತಿಯ ಮೇರೆಗೆ, ಫೆಬ್ರವರಿ 20 ರಂದು, ಬೆಂಗಳೂರಿನ ಡಿಆರ್ ಐ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಕೆಐಎ) ಈಶಾನ್ಯ ರಾಜ್ಯದ ಮಹಿಳೆಯೊಬ್ಬರನ್ನು ಬಂಧಿಸಿದ್ದು, ಆಕೆಯ ಬಳಿಕ ಇದ್ದ 30 ಕೋಟಿ ರೂಪಾಯಿ ಮೌಲ್ಯದ 2.5 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಹೆಚ್ಚಿನ ತನಿಖೆಗಾಗಿ ಡಿಆರ್‌ಐ, ಬೆಂಗಳೂರು, ಚೆನ್ನೈ ಮತ್ತು ಮುಂಬೈನಲ್ಲಿರುವ ತಮ್ಮ ಸಹವರ್ತಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದೆ.
"ಡಿಆರ್ ಐ ಬೆಂಗಳೂರು ನೀಡಿದ ಮಾಹಿತಿ ಆಧಾರದ ಮೇಲೆ, ಫೆಬ್ರವರಿ 26 ರಂದು, ಚೆನ್ನೈ ಡಿಆರ್ ಐ, ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಶಾನ್ಯ ರಾಜ್ಯದ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು, ಆತನ ಬಳಿ ಇದ್ದ 2.5 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದ್ದಾರೆ. ನಂತರ ಫೆಬ್ರವರಿ 27 ರಂದು, ಮುಂಬೈನ ಡಿಆರ್ ಐ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೆಹಲಿ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ತಡೆದು 2.5 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂರು ಪ್ರಕರಣಗಳ ಕಾರ್ಯವೈಖರಿಯನ್ನು ಗಮನಿಸಿದರೆ, ದೆಹಲಿ ಮೂಲದ ಆಫ್ರಿಕನ್ ತಂಡ, ಅವರನ್ನು ನೇಮಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಗ್ಯಾಂಗ್ ವಿಶೇಷವಾಗಿ ಈಶಾನ್ಯ ರಾಜ್ಯದ ವ್ಯಕ್ತಿಗಳಿಗೆ ನಿಷೇಧಿತ ಡ್ರಗ್ಸ್ ಕಳ್ಳಸಾಗಣೆ ಮಾಡಲು ಆಮಿಷವೊಡ್ಡುತ್ತದೆ. ಇತ್ತೀಚಿನವರೆಗೂ, ಆಫ್ರಿಕನ್ನರು ಭಾರತಕ್ಕೆ ನಿಷೇಧಿತ ಮಾದಕವಸ್ತುವನ್ನು ಸಾಗಿಸುವಾಗ ಸಿಕ್ಕಿಬಿದ್ದರು. ಆದರೆ ಮಾದಕ ವಸ್ತು ಕಳ್ಳಸಾಗಣೆಗಾಗಿ ಆಫ್ರಿಕಾಕ್ಕೆ ತೆರಳುತ್ತಿದ್ದ ಭಾರತೀಯರನ್ನು ನಾವು ಹಿಡಿದಿರುವುದು ಇದೇ ಮೊದಲು ಎಂದು ಬೆಂಗಳೂರಿನ ಡಿಆರ್ ಐ ಮೂಲಗಳು ತಿಳಿಸಿವೆ.
Post a Comment