ಶೇ.17ರಷ್ಟು ವೇತನ ಹೆಚ್ಚಳ ಮಧ್ಯಂತರ ಆದೇಶಕ್ಕೆ ಒಪ್ಪಿಗೆ: ಮುಷ್ಕರ ವಾಪಸ್ ಪಡೆದ ಸರ್ಕಾರಿ ನೌಕರರು

 ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿರುವುದನ್ನು ಒಪ್ಪಿಕೊಂಡಿರುವ ಸರ್ಕಾರಿ ನೌಕರರು ಅಂತಿಮವಾಗಿ ಮುಷ್ಕರವನ್ನು ಬುಧವಾರ ವಾಪಸ್ ಪಡೆದುಕೊಂಡಿದ್ದಾರೆ.

ಷಡಕ್ಷರಿ
By : Rekha.M
Online Desk

ಬೆಂಗಳೂರು: ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿರುವುದನ್ನು ಒಪ್ಪಿಕೊಂಡಿರುವ ಸರ್ಕಾರಿ ನೌಕರರು ಅಂತಿಮವಾಗಿ ಮುಷ್ಕರವನ್ನು ಬುಧವಾರ ವಾಪಸ್ ಪಡೆದುಕೊಂಡಿದ್ದಾರೆ.

ಶೇ.17ರಷ್ಟು ವೇತನ ಹೆಚ್ಚಳ ಮಾಡಿರುವುದಾಗಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ವಿಧಾನಸೌಧದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ, ಆದೇಶವನ್ನು ಪಡೆದುಕೊಂಡರು.

ನಂತರ ಕಬ್ಬನ್ ಪಾರ್ಕ್ ನಲ್ಲಿರುವ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಮತಾನಾಡಿದ ಅವರು, ನೌಕರರ ವೇತನವನ್ನು ಶೇ 17 ರಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರದ ಆದೇಶವನ್ನು ಪಡೆದಿದ್ದೇವೆ. ನಮ್ಮ ಬೇಡಿಕೆಗೆ ಈಡೇರಿಕೆಗೆ ಮುಷ್ಕರ ನಡೆಸಲಾಗಿತ್ತು. ಸರ್ಕಾರದ ಆದೇಶ ಆಗಿದೆ. ಈ ಮೂಲಕ ನಮ್ಮ ಹೋರಾಟ ಸಫಲವಾಗಿದೆ. ತಮ್ಮ ಬೇಡಿಕೆಗೆ ಸರ್ಕಾರ ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದರು. ಇದೇ ವೇಳೆ ಎಲ್ಲಾ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದರು.

Post a Comment

Previous Post Next Post