ಗ್ರಾಮ ಪಂಚಾಯಿತಿ ಸದಸ್ಯನ ಜೇಬಿಗೆ ಬ್ಲೇಡ್ ಹಾಕಿ ಹಣ್ ಕದಿಯುವಾಗ ಸಿಕ್ಕಿ ಬಿದ್ದ ಕಳ್ಳ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಗುಡಗೇರಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟನೆ, ಕಳ್ಳನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು.
ಧಾರವಾಡ ಜಿಲ್ಲೆ ಕುಂದಗೋಳ ಗ್ರಾಮದಲ್ಲಿ ನಡೆಯುತ್ತಿರುವ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಜೇಬು ಕಳ್ಳನೊಬ್ಬ ಬ್ಲೇಡ್ ನಿಂದ ಕಿಸೆ ಕತ್ತರಿಸಿ ಹಣ ಎಗರಿಸುವಾಗ ಗ್ರಾಮಸ್ಥರ ಕೈಗೆ ಸಿಕ್ಕಿ ಬಿದ್ದ ಘಟನೆ ನಡೆದಿದೆ. ಕಳ್ಳ ಹುಬ್ಬಳಿಯ ಸೆಟ್ಲಮೆಂಟ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ಗುಡಗೇರಿ ಗ್ರಾಮ ಪಂಚಯಿತಿ ಸದಸ್ಯ ಅಶೋಕ್ ತಿರ್ಲಾಪುರ ಎಂಬುವವರ ಜೇಬಿಗೆ ಬ್ಲೇಡ್ ನಿಂದ ಹರಿದು ಹಣ ದೋಚುವಾಗ ಸಿಕ್ಕಿ ಬಿದ್ದಿದ್ದಾನೆ ಕೂಡಲೇ ಕಳ್ಳನನ್ನು ಹಿಡಿದ ಸಾರ್ವಜನಿಕರು ಕಳ್ಳನಿಗೆ ಧರ್ಮದೇಟು ನೀಡಿ ಗುಡಗೇರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
Post a Comment