ಶಿವಮೊಗ್ಗ: ಹೋಳಿ ಹಬ್ಬದ ಆಚರಣೆಗಾಗಿ ಹೆಚ್ಚಿನ ಶಬ್ದ ಬರುವ ರೀತಿ ಸೈಲೆನ್ಸರ್ ಪೈಪ್ ಬದಲಾವಣೆ; ದೋಷಪೂರಿತ ಸೈಲೆನ್ಸರ್ ವಶಕ್ಕೆ ಪಡೆದು, ದಂಡ ವಿಧಿಸಿದ ಪೊಲೀಸ್ ಅಧಿಕಾರಿಗಳು.

 ಈ ದಿನ  ದಿನಾಂಕ 08-03-2023 ರಂದು ಹೋಳಿ ಹಬ್ಬದ ಆಚರಣೆಯ ವೇಳೆ ಶಿವಮೊಗ್ಗ ನಗರದಲ್ಲಿ ಕೆಲವು ಯುವಕರು ತಮ್ಮ ದ್ವಿಚಕ್ರ ವಾಹನಗಳನ್ನು ಸೈಲೆನ್ಸರ್ ಪೈಪ್ ಗಳನ್ನು ಹೆಚ್ಚಿನ ಶಬ್ದ ಬರುವ ರೀತಿ ಮಾರ್ಪಡಿಸಿ, ಕರ್ಕಶ ಶಬ್ದ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ನಗರದಲ್ಲಿ ಸಂಚರಿಸುತ್ತಿದ್ದವರ ಮೇಲೆ ಶ್ರೀಮತಿ ಜಯಶ್ರೀ ಎಸ್ ಮಾನೆ ಸಿಪಿಐ ಸಂಚಾರ ವೃತ್ತ, ಶಿವಮೊಗ್ಗ ರವರ ನೇತೃತ್ವದಲ್ಲಿ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆ ಮತ್ತು ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂಧಿಗಳ ತಂಡವು ಕಾರ್ಯಾಚರಣೆ ನಡೆಸಿ, ದೋಷಪೂರಿತ ಸೈಲೆನ್ಸರ್ ಗಳನ್ನು ಅಳವಡಿಸಿದ್ದ ಒಟ್ಟು 10 ದ್ವಿ ಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಐಎಂವಿ ಕಾಯ್ದೆ ಅಡಿಯಲ್ಲಿ ದಂಡ ವಿಧಿಸಿ, ದೋಷಪೂರಿತ ಸೈಲೆನ್ಸರ್ ಪೈಪ್ ಗಳನ್ನು ವಶಕ್ಕೆ ಪಡೆದು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗಿರುತ್ತದೆ.Post a Comment

Previous Post Next Post