ಶಿವಮೊಗ್ಗ: ಹೋಳಿ ಹಬ್ಬದ ಹಿನ್ನಲೆ ಪೊಲೀಸ್ ಬಿಗಿಬಂದೋಬಸ್ತ್; ಅಂಗಡಿ ಮತ್ತು ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಸೂಚನೆ.

ದಿನಾಂಕ 06-03-2023 ರಂದು ಕೋಟೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಶ್ರೀ ಶಿವಪ್ರಸಾದ್ ರಾವ್, ರವರು ಮುಂಬರುವ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಸಮಿತಿ ಸಭೆಯನ್ನು ನಡೆಸಿ Public Safty Act ಅಡಿಯಲ್ಲಿ ತಮ್ಮ ಅಂಗಡಿ ಮತ್ತು ಮನೆಗಳಿಗೆ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳುವಂತೆ ಸೂಚಿಸಿದರು ಮತ್ತು ಹೋಳಿ ಹಬ್ಬದ ದಿನದಂದು ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿಕೊಂಡು, ಹೋಳಿ ಆಡುವ ಸಮಯದಲ್ಲಿ ಸಾವರ್ಜನಿಕರಿಗೆ ತೊಂದರೆ ನೀಡುವ ಮತ್ತು ದ್ವಿಚಕ್ರ ವಾಹನಗಳಲ್ಲಿ ಸಾರ್ವಜನಿಕವಾಗಿ ಉಪಟಳ  (Public Nuisance)  ಉಂಟು ಮಾಡುವವರ ವಿರುಧ್ಧ ನಿಗಾವಹಿಸಿ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿರುತ್ತಾರೆ.Post a Comment

Previous Post Next Post