ಶಿವಮೊಗ್ಗ: ಶಿವಮೊಗ್ಗದ ವಿಮಾನ ನಿಲ್ದಾಣಕ್ಕಾಗಿ ಸೋಗಾನೆ ಗ್ರಾಮದ ಸರ್ವೇ ನಂ 120 ರ ರೈತರ ಜಮೀನು ವಶ; ಭೂ ಪರಿಹಾರ ದೊರಕದೆ ಸಂಕಷ್ಟಕ್ಕೆ ಸಿಲುಕಿಕೊಂಡು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರು.

 ಶಿವಮೊಗ್ಗದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ವಿಮಾನನಿಲ್ದಾಣಕ್ಕೆ ಸಂಬಂದಪಟ್ಟಂತೆ ಶಿವಮೊಗ್ಗ ತಾಲ್ಲೂಕು, ನಿದಿಗೆ ಹೋಬಳಿ, ಸೋಗಾನೆ ಗ್ರಾಮ, ಸರ್ವೇ ನಂ120 ರ ಅನೇಕ ರೈತರ 24 ಎಕರೆ ಜಮೀನನ್ನು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆಂದು ಹೆಚ್ಚುವರಿಯಾಗಿ ವಶಪಡಿಸಿಕೊಂಡಿದ್ದು, ಪ್ರಾರಂಭದಲ್ಲಿ ಅವರುಗಳ ಜಮೀನನ್ನು ವಿಮಾನ ನಿಲ್ದಾಣಕ್ಕಾಗಿ ಹೆಚ್ಚುವರಿಯಾಗಿ ವಶಪಡಿಸಿಕೊಳ್ಳಲು ಮುಂದಾದಾಗ ಎಲ್ಲ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.  ಇದಕ್ಕೆ ಸಂಬಂದಪಟ್ಟಂತೆ ಮಾನ್ಯ ಗ್ರಾಮಾಂತರ ಶಾಸಕರು ಹಾಗೂ ಮಾನ್ಯ ಉಪಾವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಭೂ ಪರಿಹಾರದ ವಿಷಯವಾಗಿ ಸಭೆಯನ್ನು ಕರೆದು ಆ ಜಮೀನಿಗೆ ಸಂಬಂದಪಟ್ಟ ಎಲ್ಲಾ ರೈತರಿಗೂ ಜಮೀನಿನ ಪ್ರತಿ ಎಕರೆಗೆ 40 ಲಕ್ಷ ರೂ ಹಣ ಮತ್ತು ಒಂದು ನಿವೇಶನವನ್ನು ಕೊಡಲು ಸಭೆಯಲ್ಲಿ ತೀರ್ಮಾನಿಸಿ ಭರವಸೆ ನೀಡಿದ್ದರು. ಆದರೆ ಈ ಸಭೆನಡೆಸಿ ತಿಂಗಳುಗಳೇ ಕಳೆದರೂ ಇನ್ನೂ ಅವರಿಗೆ ಯಾವುದೇ ರೀತಿಯ ಪರಿಹಾರ ದೊರೆತಿಲ್ಲ. ಇದರಿಂದ ಬೇಸರಗೊಂಡ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


  ಭೂ ಪರಿಹಾರಕ್ಕೆ ಸಂಬಂದಪಟ್ಟಂತೆ ನ್ಯಾಯ ದೊರಕಿಸಿಕೊಡುವವರೆಗೆ ಕಾಮಗಾರಿಯನ್ನು ತಡೆ ಹಿಡಿಯುತ್ತೇವೆ ಎಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಈ ಮುಂಚೆಯು ಸಹ ಅನೇಕ ಭಾರಿ ಜಿಲ್ಲಾಧಿಕಾರಿಯವರಿಗೂ ಮತ್ತು ಉಪ ವಿಭಾಗಾಧಿಕಾರಿಗಳಿಗೆ ಮನವಿ ಮತ್ತು ಅರ್ಜಿಯನ್ನು ಸಲ್ಲಿಸಿದ್ದರೂ ಇಲ್ಲಿಯವರೆಗು ಯಾವುದೇ ಪ್ರಯೋಜನವಾಗಿಲ್ಲ ಎಂದು ಬೆಸರ ವ್ಯಕ್ತಪಡಿಸಿದ್ದಾರೆ. ಭೂ ಪರಿಹಾರ ಮತ್ತು ಭೂ ನಿವೇಶನ ಸಿಗುವವರೆಗೆ ಅಕ್ರಮವಾಗಿ ನಡೆಸುತ್ತಿರುವ  ವಿಮಾನ ನಿಲ್ದಾಣ ಕಾಮಗಾರಿಯನ್ನು ತಡೆ ಹಿಡಿದು ಭೂ ಪರಿಹಾರ ಒದಗಿಸಿಕೊಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.

ದಿನಾಂಕ 26 ರ ಒಳಗಡೆ ಪರಿಹಾರ ಒದಗಿಸದಿದ್ದರೆ ವಿಮಾನ ನಿಲ್ದಾಣದ ಬಳಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅವರುಗಳ ಜಮೀನಿಗೆ ಖಾತೆ ಮತ್ತು ಪಹಣಿ ಸೇರಿದಂತೆ ಎಲ್ಲಾ ದಾಖಲೆಗಳು ಇದ್ದು, 40-50 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದರು ಸಹ ಈ ರೀತಿ ಅವರುಗಳ ವಿಮಾನ ನಿಲ್ದಾಣ ನಿರ್ಮಾಣಕ್ಕೆಂದು ಅವರ ಜಮೀನು ವಶಪಡಿಸಿಕೊಂಡು ಪರಿಹಾರ ಒಸದಗಿಸದೆ ಈ ರೀತಿ ಬೇಜವಬ್ದಾರಿ ತೋರುತ್ತಿರುವುದು ರೈತರ ಆಕ್ರೋಶಕ್ಕೆ  ಮುಖ್ಯ ಕಾರಣವಾಗಿದೆ.

Post a Comment

Previous Post Next Post