ಪ್ರಧಾನಿ ಹೆಸರು 'ಗೌತಮ್‌ದಾಸ್ ಮೋದಿ' ಎಂದ ಕಾಂಗ್ರೆಸ್ ನಾಯಕ ಪವನ್ ಖೇರಾ ವಿರುದ್ಧ ಕೇಸ್ ದಾಖಲು

 ಉದ್ಯಮಿ ಅದಾನಿ ವಿಚಾರದಲ್ಲಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂದೆಯ ಹೆಸರನ್ನು 'ಅಪಹಾಸ್ಯ' ಮಾಡುತ್ತಿವೆ ಎಂದು ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

                                                           ಪವನ್ ಖೇರಾ

By : Rekha.M
Online desk



ಲಖನೌ: ಉದ್ಯಮಿ ಅದಾನಿ ವಿಚಾರದಲ್ಲಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂದೆಯ ಹೆಸರನ್ನು 'ಅಪಹಾಸ್ಯ' ಮಾಡುತ್ತಿವೆ ಎಂದು ಭಾರತೀಯ ಜನತಾ ಪಾರ್ಟಿ, ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಕಾಂಗ್ರೆಸ್ ವಕ್ತಾರರು ಮೋದಿ ಅವರ ದಿವಂಗತ ತಂದೆಯನ್ನು ಉದ್ದೇಶಪೂರ್ವಕವಾಗಿ ಗೇಲಿ ಮಾಡಿದ್ದಾರೆ ಎಂದು ಆರೋಪಿಸಿ ಲಖನೌ ಮೂಲದ ಬಿಜೆಪಿ ಮುಖಂಡ ಮುಖೇಶ್ ಶರ್ಮಾ ನೀಡಿದ ದೂರಿನ ಮೇರೆಗೆ ಉತ್ತರ ಪ್ರದೇಶ ಪೊಲೀಸರು ಸೋಮವಾರ ಖೇರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಫೆಬ್ರವರಿ 17 ರಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಖೇರಾ ಅವರು, ಹಿಂಡೆನ್ಬರ್ಗ್- ಅದಾನಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಮಾಜಿ ಪ್ರಧಾನಿಗಳಾದ ಪಿ ವಿ ನರಸಿಂಹರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರೇ ಜಂಟಿ ಸಂಸದೀಯ ಸಮಿತಿಯನ್ನು(ಜೆಪಿಸಿ) ರಚಿಸಿರುವಾಗ 'ನರೇಂದ್ರ ಗೌತಮ್‌ದಾಸ್ ಅವರ ಸಮಸ್ಯೆ ಏನು? ಕ್ಷಮಿಸಿ.... ನರೇಂದ್ರ ದಾಮೋದರದಾಸ್ ಮೋದಿ' ಅವರ ಸಮಸ್ಯೆ ಏನು? ಎಂದು ಖೇರಾ ಪ್ರಶ್ನಿಸಿದ್ದರು.

"ಹೆಸರು ಮಾತ್ರ ದಾಮೋದರದಾಸ್ ಮೋದಿ. ಆದರೆ ಅವರು ಮಾಡುವ ಕೆಲಸಗಳು ಮಾತ್ರ ಗೌತಮದಾಸ್ ಅವರದ್ದು" ಎಂದು ಖೇರಾ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

'ನಂತರ ಅದು(ಮೋದಿ ಪೂರ್ಣ ಹೆಸರು) ದಾಮೋದರದಾಸ್ ಅಥವಾ ಗೌತಮ್ ದಾಸ್ ಎಂದು ನಾನು ನಿಜವಾಗಿಯೂ ಗೊಂದಲಕ್ಕೊಳಗಾಗಿದ್ದೇನೆ' ಎಂದು ಖೇರಾ ಫೆಬ್ರವರಿ 17 ರಂದು ಟ್ವೀಟ್‌ ಮಾಡಿದ್ದರು.

ಖೇರಾ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು, ಕಾಂಗ್ರೆಸ್ ಪದೇ ಪದೇ ಪ್ರಧಾನಿಯನ್ನು ಟಾರ್ಗೆಟ್ ಮಾಡುತ್ತಿದೆ. ಈಗ ಅವರ ಮೃತ ತಂದೆಯನ್ನು ಸಹ ಬಿಟ್ಟಿಲ್ಲ ಎಂದು ಹೇಳಿದ್ದಾರೆ.

Post a Comment

Previous Post Next Post