ಮೆಟಾದಿಂದ ಫೇಸ್ ಬುಕ್, ಇನ್ ಸ್ಟಾಗ್ರಾಂನ ಬ್ಲೂ ಟಿಕ್ ಗಾಗಿ ಮಾಸಿಕ ಶುಲ್ಕ ಪ್ರಾರಂಭ: ಯಾರಿಗೆ ಮತ್ತು ಏಕೆ?

 ಮೆಟಾ ಕೂಡ ಟ್ವಿಟ್ಟರ್ ಮಾದರಿಯಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಂನ ಚಂದಾದಾರಿಕೆ ಮಾಸಿಕ ಶುಲ್ಕ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

                                                                 ಮೆಟಾ ಸಂಸ್ಥೆ

By : Rekha.M
Online Desk

ಮೆಟಾ ಕೂಡ ಟ್ವಿಟ್ಟರ್ ಮಾದರಿಯಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಂನ ಚಂದಾದಾರಿಕೆ ಮಾಸಿಕ ಶುಲ್ಕ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. 

ಮೆಟಾ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮೂಲಕ ಚಂದಾದಾರಿಕೆ ಸೇವೆಯ ಬಗ್ಗೆ ಮಾಹಿತಿ ನೀಡಿದ್ದಾರೆ.  ಈ ವಾರ ನಾವು ಮೆಟಾ ವೆರಿಫೈಡ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಒಂದು ರೀತಿಯ ಚಂದಾದಾರಿಕೆ ಸೇವೆ ಇದೆ. ಇದು ಬಳಕೆದಾರರಿಗೆ ತಮ್ಮ ಖಾತೆಯನ್ನು ಸರ್ಕಾರಿ ಗುರುತಿನ ಚೀಟಿಯೊಂದಿಗೆ ಪರಿಶೀಲಿಸಲು ಅನುವು ಮಾಡಿಕೊಡುತ್ತದೆ.

ಬ್ಲೂ ಬ್ಯಾಡ್ಜ್‌ ಹೊಂದಿದವರು ನಕಲಿ ಖಾತೆಗಳಿಂದ ರಕ್ಷಣೆ ಪಡೆಯುತ್ತಾರಲ್ಲದೇ, ನೇರವಾಗಿ ಗ್ರಾಹಕ ಸೇವೆಗಳನ್ನು ಪಡೆಯಬಹುದು. ತಮ್ಮ ಸೇವೆಗಳ ವಿಶ್ವಾಸಾರ್ಹತೆ ಹಾಗೂ ಭದ್ರತೆ ಹೆಚ್ಚಿಸುವ ಸಲುವಾಗಿ ಈ ಚಂದಾದಾರಿಗೆ ಪರಿಚಯಿಸಿದಾಗಿ ಮೆಟಾ ಹೇಳಿದೆ.

ಜುಕರ್‌ಬರ್ಗ್ ಪ್ರಕಾರ, ಬಳಕೆದಾರರು ವೆಬ್ ಆಧಾರಿತ ಪರಿಶೀಲನೆಗಾಗಿ ತಿಂಗಳಿಗೆ $11.99 (ರೂ. 992.36) ಮತ್ತು ಆ್ಯಪಲ್‌ ಹಾಗೂ ಆ್ಯಂಡ್ರಾಯ್ಡ್‌ ಬಳಕೆದಾರರು ಸೇವೆಗಾಗಿ ತಿಂಗಳಿಗೆ $14.99 (ರೂ. 1240.65) ಪಾವತಿಸಬೇಕಾಗುತ್ತದೆ. ಮೊದಲಿಗೆ ಮೆಟಾ ವೆರಿಫೈಡ್ ಚಂದಾದಾರಿಕೆ ಸೇವೆಯನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಪ್ರಾರಂಭಿಸಲಾಗುವುದು. ನಂತರ ಬೇರೆ ದೇಶಗಳಲ್ಲೂ ಈ ಸೇವೆ ಆರಂಭವಾಗಲಿದೆ ಎಂದರು. ಭಾರತದಲ್ಲಿ ಈ ಸೇವೆ ಯಾವಾಗ ಪ್ರಾರಂಭವಾಗಲಿದೆ ಎಂದು ಜುಕರ್‌ಬರ್ಗ್ ಹೇಳಿಲ್ಲ. ಕೆಲವು ದಿನಗಳ ಹಿಂದೆ ಟ್ವಿಟರ್ ಭಾರತದಲ್ಲಿ ಬ್ಲೂ ಟಿಕ್ ಸೇವೆಯನ್ನು ಪ್ರಾರಂಭಿಸಿತ್ತು.

ಪ್ರಭಾವಿಗಳಿಗೆ ಆದ್ಯತೆ
ಚಂದಾದಾರರು ತಮ್ಮ ಪ್ರೊಫೈಲ್ ಹೆಸರು ಮತ್ತು ಫೋಟೋಗೆ ಹೊಂದಿಕೆಯಾಗುವ ಸರ್ಕಾರಿ ಐಡಿಯನ್ನು ಸಲ್ಲಿಸಬೇಕು, ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ಹಿಂದಿನ ಪೋಸ್ಟ್ ಇತಿಹಾಸವನ್ನು ಹೊಂದಿರಬೇಕು. ಇನ್ನು ಈಗಾಗಲೇ ವೆರಿಫೈಡ್‌ ಖಾತೆಗಳನ್ನು ಹೊಂದಿರುವವರಿಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದಿರುವ ಮೆಟಾ, ಗಣ್ಯ ವ್ಯಕ್ತಿಗಳು ಅಲ್ಲದೇ ಇದ್ದರೂ, ಸಂಪಾದನೆ ಉದ್ದೇಶ ಹೊಂದಿರುವ ಇನ್ಫುಲೆನ್ಸರ್‌ಗಳನ್ನು ಗುರಿಯಾಗಿಸಿಕೊಂಡು ಈ ಯೋಜನೆ ಜಾರಿಗೆ ತಂದಿದ್ದಾಗಿ ಮೆಟಾ ಹೇಳಿದೆ.

2012ರಲ್ಲಿ ಸಾರ್ವಜನಿಕವಾದ ನಂತರ ಮೊದಲ ಬಾರಿಗೆ 2022ರಲ್ಲಿ ಮೆಟಾ ತನ್ನ ಜಾಹೀರಾತು ಆದಾಯದಲ್ಲಿ ಕುಸಿತ ಕಂಡಿತ್ತು. ಹೀಗಾಗಿ ಮಾಸಿಕ ಶುಲ್ಕದಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಟ್ವೀಟರ್ ಮಾಲೀಕ ಎಲಾನ್ ಮಸ್ಕ್ ಅವರು, ಎರಡು ತಿಂಗಳ ಹಿಂದಷ್ಟೇ ವೆರಿಫೈಡ್‌ ಖಾತೆಗಳಿಗೆ ಮಾಸಿಕ $ 8 ವಿಧಿಸುವ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸಿದ್ದರು.

Post a Comment

Previous Post Next Post