ನಾಪತ್ತೆಯಾಗಿದ್ದ 4 ವರ್ಷದ ಮಗು ಸೋಮವಾರ ಕೆರೆಯಲ್ಲಿ ಶವವಾಗಿ ಪತ್ತೆ.

 ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ 4 ವರ್ಷದ ಮಗು ನಿನ್ನೆ ಸೋಮವಾರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದೆ.ಎರಡು ದಿನಗಳ ಹಿಂದೆ ಮಗು ಕಾಣೆಯಾಗಿತ್ತು ಎಂದು ಅವರ ತಂದೆ ದೂರು ಸಲ್ಲಿಸಿದ್ದರು. ಸೋಮವಾರ ಕೆರೆಯಲ್ಲಿ ಶವ ತೇಲಿ ಬಂದಿದೆ. ತಮ್ಮ ಮೊದಲನೇ ಮಗು ಕಾಣೆಯಾಗಿದ್ದಾನೆ ಎಂದು ಅವರ ತಂದೆ ದೂರು ನೀಡಿದ್ದರು. ರಾಗಿ ಗುಡ್ಡದಲ್ಲಿ ಈ ಘಟನೆ ನಡೆದಿದೆ. ಕಳೆದ ಫೆ.12 ರಂದು ಮನೆಯ ಬಳಿ ಆಡುತ್ತಿದ್ದ ಮಗು ನಾಪತ್ತೆಯಾಗಿತ್ತು. ನಿನ್ನೆ ಕೆರೆಯಲ್ಲಿ ಶವ ತೇಲಿ ಬಂದಿದ್ದನ್ನು ಕಂಡ  ಸ್ಥಳೀಯರು ಪೋಷಕರಿಗೆ ತಿಳಿಸಿದ್ದಾರೆ. ಮಗು ಆಟವಾಡುತ್ತಾ ಕೆರೆಗೆ ಹೋಗಿ ಬಿದ್ದಿರಬಹುದು ಎಂದು ಊಹಿಸಲಾಗಿದ್ದು,ಈ ಸಂಬಂಧ ತನಿಖೆ ನಡೆಯುತ್ತಿದೆ.Post a Comment

Previous Post Next Post