ಹಂಪಿ: ಪವಿತ್ರ ಪುರಂದರ ಮಂಟಪದಲ್ಲಿ ವಿದೇಶಿಯರ ಮೋಜು ಮಸ್ತಿ; ಸಿಗರೇಟ್, ಮದ್ಯಸೇವನೆ

 ಶ್ವಪ್ರಸಿದ್ಧ ಹಂಪಿಯ ಪುರಂದರ ಮಂಟಪದೊಳಗೆ ಕುಳಿತು ವಿದೇಶಿಯರು ಸೋಮವಾರ ಮದ್ಯ ಸೇವಿಸಿರುವುದು ಕಂಡು ಬಂದಿದೆ. ಹಂಪಿಯಲ್ಲಿ ಮದ್ಯ, ಮಾಂಸಾಹಾರ ಸೇವನೆ ಮೇಲೆ ನಿಷೇಧವಿದೆ. ಪುರಂದರ ಮಂಟಪದ ಬಳಿ ಸೇರಿದಂತೆ ಕೆಲವೆಡೆ ಈ ಬಗ್ಗೆ ನಾಮಫಲಕಗಳನ್ನೂ ಹಾಕಲಾಗಿದೆ.

                                                               ಹಂಪಿ ( ಸಂಗ್ರಹ ಚಿತ್ರ)

By : Rekha.M
Online Desk

ಹುಬ್ಬಳ್ಳಿ: ವಿಶ್ವಪ್ರಸಿದ್ಧ ಹಂಪಿಯ ಪುರಂದರ ಮಂಟಪದೊಳಗೆ ಕುಳಿತು ವಿದೇಶಿಯರು ಸೋಮವಾರ ಮದ್ಯ ಸೇವಿಸಿರುವುದು ಕಂಡು ಬಂದಿದೆ.

ಹಂಪಿಯಲ್ಲಿ ಮದ್ಯ, ಮಾಂಸಾಹಾರ ಸೇವನೆ ಮೇಲೆ ನಿಷೇಧವಿದೆ. ಪುರಂದರ ಮಂಟಪದ ಬಳಿ ಸೇರಿದಂತೆ ಕೆಲವೆಡೆ ಈ ಬಗ್ಗೆ ನಾಮಫಲಕಗಳನ್ನೂ ಹಾಕಲಾಗಿದೆ. ಇದೇ ಪರಿಸರದಲ್ಲಿ ಪೊಲೀಸರು, ಗೃಹರಕ್ಷಕರು, ಪ್ರವಾಸಿ ಮಿತ್ರರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಾರೆ. ಹೀಗಿದ್ದರೂ ಅವರನ್ನು ಲೆಕ್ಕಿಸದೇ ನಾಲ್ಕೈದು ಜನ ವಿದೇಶಿಯರು ನದಿಯಲ್ಲಿ ಸ್ನಾನ ಮಾಡಿ, ಮಂಟಪದೊಳಗೆ ಕುಳಿತು ಮದ್ಯ ಸೇವಿಸಿದ್ದಾರೆ.

ಅದೇ ಪರಿಸರದಲ್ಲಿ ಓಡಾಡುತ್ತಿದ್ದ ಸ್ಥಳೀಯರು ಇದನ್ನು ಗಮನಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರ ಗಮನಕ್ಕೆ ತಂದಿದ್ದಾರೆ. ಅನಂತರ ಪೊಲೀಸರು ವಿದೇಶಿಯರನ್ನು ಅಲ್ಲಿಂದ ಕಳುಹಿಸಿಕೊಟ್ಟಿದ್ದಾರೆ.

ಹಂಪಿಯ ಪುರಂದರ ಮಂಟಪದ ಬಳಿ ವಿದೇಶಿಗರು ಮದ್ಯ ಸೇವನೆ ಮಾಡುತ್ತಿದ್ದಾರೆ ಎಂದು ಹೇಳುವ ವಿಡಿಯೋ ಫೋಟೊಗಳು ಹರಿದಾಡುತ್ತಿವೆ. ಹಂಪಿಯಲ್ಲಿ ಮಾಂಸಹಾರ, ಮದ್ಯಪಾನ ಸೇವನೆ ನಿಷೇಧವಿದ್ದರೂ ಈ ರೀತಿಯ ವರ್ತ‌ನೆ ನಡೆಯುತ್ತಿದೆ.

ಪೊಲೀಸ್ ಇಲಾಖೆ, ಪ್ರವಾಸಿ ಮಿತ್ರರರ ಕಣ್ತಪ್ಪಿಸಿ, ವಿದೇಶಿಗರು ಮದ್ಯಪಾನ ಸೇವನೆ ಮಾಡಿದ್ರಾ ಎನ್ನುವ ಪ್ರಶ್ನೆ ಎದ್ದಿದೆ. ಹಂಪಿಯಲ್ಲಿ ಮದ್ಯಪಾನ, ಮಾಂಸಾಹಾರ ಸೇವನೆ ಮಾಡಬಾರದು ಅಂತ ಬೋರ್ಡ್​ಗಳನ್ನು ಹಾಕಲಾಗಿದೆ. ಆದರೂ ಈ ರೀತಿಯ ವರ್ತನೆ ಮಾಡುವುದು ಸರಿಯಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಆದರೆ ಮದ್ಯ ಸೇವಿಸಬಾರದು ಎಂಬ ಬೋರ್ಡ್ ಎಲ್ಲಿಯೂ ಕಾಣಲಿಲ್ಲ ಎಂದು ಪ್ರವಾಸಿಗರೊಬ್ಬರು ವಾದಿಸಿದ್ದಾರೆ. ನಂತರ ಪ್ರವಾಸಿಗರಿಗೆ ಇಲ್ಲಿನ ನಿಯಮ ವಿವರಿಸಿ ಪೊಲೀಸರಿಗೆ ಕರೆ ಮಾಡಿದ್ದಾಗಿ ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಹಂಪಿಗೆ ವಾರ್ಷಿಕವಾಗಿ ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರು ಬೇಟಿ ನೀಡುತ್ತಾರೆ.. ಹಂಪಿಯ ಪ್ರಸಿದ್ಧ ಸ್ಮಾರಕಗಳಿಗೆ ಭೇಟಿ ನೀಡುವುದರ ಜೊತೆಗೆ, ಇಲ್ಲಿ ಒದಗಿಸಲಾದ ರಾಕ್ ಕ್ಲೈಂಬಿಂಗ್ ಮತ್ತು ಜಲಕ್ರೀಡೆ ಚಟುವಟಿಕೆಗಳಿಂದಾಗಿ ಹೆಚ್ಚಿನ ವಿದೇಶಿಗರು ಹಂಪಿಯತ್ತ ಆಕರ್ಷಿತರಾಗುತ್ತಾರೆ. ಹಂಪಿ ಬಳಿಯ ತುಂಗಭದ್ರಾ ನದಿ ಹಾಗೂ ಕೊಪ್ಪಳದ ಆನೆಗುಂದಿಯಲ್ಲಿ ವಿದೇಶಿಯರು ಈಜುತ್ತಾರೆ.

ಹಲವಾರು ಬಾರಿ ವಿದೇಶಿ ಪ್ರವಾಸಿಗರು ಹಂಪಿಯ ಗುಡ್ಡಗಾಡು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾವಾಗಿಯೇ ಸುತ್ತಾಡುತ್ತಾರೆ. ಅವರು ಸಾಮಾನ್ಯವಾಗಿ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದಾಗ ಅಥವಾ ಬಾಡಿಗೆ ಸೈಕಲ್‌ಗಳನ್ನು ಬಾಡಿಗೆಗೆ ಪಡೆಯುವಗ ನಾವು ಅವರಿಗೆ ಮಾಡಬೇಕಾದ ಮತ್ತು ಮಾಡಬಾರದ ನಿಯಮಗಳ ಬಗ್ಗೆ ವಿವರಿಸುತ್ತೇವೆ.

ಅವರು ಗುಂಪು ಪ್ರವಾಸಕ್ಕೆ ಬಂದಾಗ ಗೈಡ್ ಗಳಿಗೆ ಸೂಚನೆಗಳನ್ನು ನೀಡಲಾಗುತ್ತದೆ. ಹಂಪಿ ಸುತ್ತಮುತ್ತ ನಿತ್ಯವೂ ಚಿರತೆಗಳು ಕಾಣಸಿಗುತ್ತಿರುವುದರಿಂದ ಗುಡ್ಡಗಾಡುಗಳಲ್ಲಿ ಪ್ರವಾಸಿಗರು ತಾವಾಗಿಯೇ ತೆರಳುವುದನ್ನು ನಾವು ನಿಷೇದಿಸುತ್ತೇವೆ ಎಂದು ಪ್ರವಾಸಿ ಮಾರ್ಗದರ್ಶಿಯೊಬ್ಬರು ತಿಳಿಸಿದ್ದಾರೆ.

ವಿದೇಶಿ ಪ್ರವಾಸಿಗರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ ಆದರೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ಹಂಪಿ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿದೇಶಿ ಪ್ರವಾಸಿಗರು ಸಹ ದೇವಾಲಯಗಳ ಪಾವಿತ್ರ್ಯತೆಯನ್ನು ಗೌರವಿಸುತ್ತಾರೆ ಮತ್ತು ಯಾವುದೇ ದೇವಾಲಯ ಅಥವಾ ಸ್ಮಾರಕದ ಒಳಗೆ ಧೂಮಪಾನ ನಿಷೇಧದ ಫಲಕಗಳ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.



Post a Comment

Previous Post Next Post