ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರು ಬೇಳೂರು ಗೋಪಾಲಕೃಷ್ಣ ಅವರ ಜನ್ಮದಿನ: ತೀರ್ಥಹಳಿ ಡಿಕೆ ಶಿವಕುಮಾರ್ ಅವರ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಜೆಸಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ವಿತರಣೆ.

ಸಾಗರ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು, ಬಡವರ ಬಂಧು ದಿ ಬಂಗಾರಪ್ಪ ಅವರ ಶಿಷ್ಯರು ವರ್ಣರಂಜಿತ ರಾಜಕಾರಣಿಗಳು ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರರು ಬೇಳೂರು ಗೋಪಾಲಕೃಷ್ಣ ಅವರ ಜನ್ಮದಿನದ ಅಂಗವಾಗಿ ತೀರ್ಥಹಳಿ ಡಿಕೆ ಶಿವಕುಮಾರ್ ಅವರ ಅಭಿಮಾನಿಗಳ ಸಂಘ (ರಿ) ನೇತೃತ್ವದಲ್ಲಿ ಜೆಸಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ವಿತರಣೆ  ಮಾಡುವ ಮೂಲಕ ಜನ್ಮ ದಿನಕ್ಕೆ ಶುಭಾಶಯಗಳು ಕೋರಲಾಯಿತು.

                           ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಗೋಪಾಲ ಕೃಷ್ಣ ಬೇಳೂರು ರವರು


ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮಾಜಿ ಬ್ಲಾಕ್ ಕಾಂಗ್ರೆಸ್ ಆದ ಡಾ ಸುಂದರೇಶ್ ಅವರ ಮಾರ್ಗದರ್ಶನದಲ್ಲಿ ಈ ಒಂದು ಕಾರ್ಯವನ್ನು ಮಾಡಲಾಯಿತು.

                               ಜೆಸಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ವಿತರಿಸುತ್ತಿರುವುದು

ಅಧ್ಯಕ್ಷರ ಮೇಳಿಗೆ ನಾಗೇಶ್, ಕಾರ್ಯಾದರ್ಶಿ ಕುರುವಳಿ ನಾಗರಾಜ್, ಹೊಸನಗರ ಅಧ್ಯಕ್ಷರು ಯಡೂರು ವಿಶು ಜಾವೀದ್ ಬಿಡ್ಡ, ಕಾಂಗ್ರೆಸ್ ಮುಖಂಡರು ಕರಿಮನೆ ಮಧುಕರ್ ಕುರುವಳಿ , ರಾಜೇಶ್ ಬೆಟ್ಟಮಕ್ಕಿ, ಶ್ರೀಕಾಂತ್ ಬೊಬ್ಬಿ ರಾಜು ಪ್ರದೀಪ್ ಮೇಳಿಗೆ ಉಪಸ್ಥಿತರಿದ್ದರು.

 

Post a Comment

Previous Post Next Post