SHIVAMOGGA AIRPORT ಉದ್ಘಾಟನೆಗೂ ಮೊದಲು ನಾಳೆ ಶಿವಮೊಗ್ಗದಲ್ಲಿ FLY SHIVAMOGGA ಆಚರಣೆ !

 ಶಿವಮೊಗ್ಗ ನಗರದ ಸೋಗಾನೆಯಲ್ಲಿ(sogane) ಉದ್ಘಾಟನೆಗೆ ಸಿದ್ದವಾಗುತ್ತಿರುವ ವಿಮಾನ ನಿಲ್ಧಾಣ (shivamogga Airport ) ಸದ್ಯ ಟ್ರೆಂಡಿಂಗ್ ನ್ಯೂಸ್ ಆಗಿದೆ, ಶಿವಮೊಗ್ಗದಿಂದ ದೆಹಲಿಯವರೆಗೂ, ಲೋಕಲ್​ ಚಾನಲ್​ಗಳಿಂದ ಹಿಡಿದು ರಾಷ್ಟ್ರೀಯ ಚಾನಲ್​ಗಳು ಸಹ ಶಿವಮೊಗ್ಗ ಏರ್​ಫೋರ್ಟ್​ನ ಸುದ್ದಿ ಮಾಡುತ್ತಿವೆ. ಇದರ ನಡುವೆ ಶಿವಮೊಗ್ಗದಲ್ಲಿ ಏರ್​ಫೋರ್ಟ್ ಉದ್ಘಾಟನೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ನಾಳೆ ಅಂದರೆ, ಫೆಬ್ರವರಿ 25ರಂದು ಸಂಜೆ 4 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಮುಗಿಲೆತ್ತರಕ್ಕೆ ಮಲೆನಾಡು ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿಲಾಗಿದೆ. 

Fly shivamogga  ಈ ಕಾರ್ಯಕ್ರಮವನ್ನ ಆಯೋಜಿಸಿದ್ದು, ಈ ಸಂಬಂಧ ತಂಡದ ಸಂಚಾಲಕ ಹರಿಕೃಷ್ಣ  ಮಾಹಿತಿ ನೀಡಿದ್ದಾರೆ.  ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಆಗುತ್ತಿರುವುದು  ಅತ್ಯಂತ ಸಂಭ್ರಮದ ವಿಷಯ. ಏರ್​​ಫೋರ್ಟ್ ಶಿವಮೊಗ್ಗೆಗೊಂದು ಕಲಶಪ್ರಾಯ, ಹಿಂದು, ಗರಿಮೆ, ಇದೊಂದು ಸಡಗರ ಆಚರಿಸುವಂತಹ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಇದೇ  ಫೆ.25ರಂದು ಸಂಜೆ 4 ಗಂಟೆಗೆ ಗಾಳಿಪಟಗಳನ್ನು ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ. ಮುಗಿಲೆತ್ತರಕ್ಕೆ ನಮ್ಮ ಮಲೆನಾಡು ಎಂಬ ಸ್ಲೋಗನ್​ ಅಡಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಗೀತ ಕಾರ್ಯಕ್ರ ನಡೆಯಲಿದೆ. ಅಲ್ಲದೆ ರಾತ್ರಿ ಪಟಾಕಿ ಸಿಡಿಸುವ ಕಾರ್ಯಕ್ರಮವಿದೆ ಎಂದು ತಿಳಿಸಿದ್ಧಾರೆ. 

Post a Comment

Previous Post Next Post