ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲುಶಿಕ್ಷೆ: ಕಾನೂನು ಕುಣಿಕೆಯಿಂದ ತಪ್ಪಿಸಲು ಸುಳ್ಳುಕಥೆ ಹೆಣೆಯಲು ಯತ್ನಿಸಿದ ಶಾಸಕ ಕುಮಾರಸ್ವಾಮಿ

 ಬೆಂಗಳೂರು: ಎಂಟು ಚೆಕ್ ಬೌನ್ಸ್ ಪ್ರಕರಣಗಳಲ್ಲಿ ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಬೆಂಗಳೂರು ಸಿಟಿ ಕೋರ್ಟ್ ದೋಷಿ ಎಂದು ಘೋಷಿಸಿದೆ. ಶಾಸಕರು ದೂರುದಾರರಿಗೆ ಒಟ್ಟು 1.38 ಕೋಟಿ ಮೊತ್ತವನ್ನು ಪಾವತಿಸಬೇಕು, ತಪ್ಪಿದಲ್ಲಿ ಶಾಸಕರು ಪ್ರತಿ ಪ್ರಕರಣದಲ್ಲಿ ಆರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. 

ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್‌ನ ಸೆಕ್ಷನ್ 138 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ನ್ಯಾಯಾಧೀಶ ಜೆ ಪ್ರೀತ್ ಅವರು ಕುಮಾರಸ್ವಾಮಿ ಅವರನ್ನು ದೋಷಿ ಎಂದು ಪ್ರಕಟಿಸಿ ತೀರ್ಪು ನೀಡಿದ್ದರು. 

 ಜೈಲುಶಿಕ್ಷೆಯಿಂದ ತಪ್ಪಿಸಲು ಕಥೆ ಹೆಣೆದಿದ್ದ ಶಾಸಕರು: ದೋಷಿ ಶಾಸಕ ಕುಮಾರಸ್ವಾಮಿ ಕಾನೂನಿನ ಕುಣಿಕೆಯಿಂದ ತಪ್ಪಿಸಲು ತಮ್ಮದೇ ಆದ ರೀತಿಯಲ್ಲಿ ಸುಳ್ಳಿನ ಸರಮಾಲೆಯನ್ನೇ ಸೃಷ್ಟಿಸಿದ್ದಾರೆ. ದೂರುದಾರನ ಆರ್ಥಿಕ ಸಾಮರ್ಥ್ಯವನ್ನು ಪ್ರಶ್ನಿಸಿದ್ದು, ಚುನಾವಣಾ ಸಂದರ್ಭದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳಿಂದ ಮುಕ್ತಿ ಪಡೆಯಲು ದೂರುದಾರರಿಗೆ 1.40 ಕೋಟಿ ರೂಪಾಯಿಗಳನ್ನು ನೀಡಿದ್ದೆ ಎಂದು ಹೇಳುವ ಮಟ್ಟಕ್ಕೆ ಹೋಗಿದ್ದಾರೆ. 

                                            ಶಾಸಕ ಎಂ.ಪಿ.ಕುಮಾರಸ್ವಾಮಿ.
  ಯಾವ ವಿವೇಕಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಇಷ್ಟೊಂದು ಹಣವನ್ನು ಕೊಡಲು ಸಾಧ್ಯವೇ ಎಂದು ನ್ಯಾಯಾಲಯದಲ್ಲಿ ಕುಮಾರಸ್ವಾಮಿ ಕೇಳಿದ್ದರು. ಇದು ಆರೋಪಿಗಳು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಹೆಣೆಯುವ ಕಥೆ ಹೊರತು ಬೇರೇನೂ ಅಲ್ಲ ಎಂದು ನ್ಯಾಯಾಲಯದ ಗಮನಕ್ಕೆ ಬಂದಿದೆ. 

ಆರೋಪಿ ಕುಮಾರಸ್ವಾಮಿ ವಿರುದ್ಧ 2021ರಲ್ಲಿ ಚಿಕ್ಕಮಗಳೂರು ನಗರದ ನಿವಾಸಿಯಾಗಿರುವ ದೂರುದಾರ ಎಚ್‌ಆರ್‌ ಹೂವಪ್ಪ ಗೌಡ ಎಂಬುವರು ದೂರು ದಾಖಲಿಸಿದ್ದರು. ದೂರುದಾರರು ಮತ್ತು ಆರೋಪಿಗಳಿಬ್ಬರೂ ಪರಸ್ಪರ ಪರಿಚಿತರಾಗಿದ್ದಾರೆ.

ದೂರುದಾರರಿಗೆ 1.38 ಕೋಟಿ ರೂಪಾಯಿ ಚೆಕ್ ಬೌನ್ಸ್ ಪ್ರಕರಣದಲ್ಲಿ ನೀಡಬೇಕು ಇಲ್ಲವೇ ಜೈಲಿಗೆ ಹೋಗಿ ಎಂದು ಶಾಸಕ ಕುಮಾರಸ್ವಾಮಿಗೆ ನ್ಯಾಯಾಲಯ ಆದೇಶ ನೀಡಿದೆ. 

Post a Comment

Previous Post Next Post