ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರೇ: ಸಿಎಂ ಬೊಮ್ಮಾಯಿ

 ಕರ್ನಾಟಕವು ಎಲ್ಲಾ ವರ್ಗಗಳು, ಭಾಷಾಶಾಸ್ತ್ರಜ್ಞರು ಮತ್ತು ಸಮುದಾಯಗಳನ್ನು ಸಮಾನವಾಗಿ ಕಾಣುವ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ, ಆದರೆ ಕನ್ನಡಿಗರು ಯಾವಾಗಲೂ ಅಗ್ರಸ್ಥಾನದಲ್ಲಿರುತ್ತಾರೆಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದರು.

  ಛತ್ರಪತಿ ಶಿವಾಜಿ ಮಹಾರಾಜರ 396 ನೇ ಜಯಂತ್ಯೋತ್ಸವವನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ.

By : Rekha.M
Online Desk

ಹಾವೇರಿ: ಕರ್ನಾಟಕವು ಎಲ್ಲಾ ವರ್ಗಗಳು, ಭಾಷಾಶಾಸ್ತ್ರಜ್ಞರು ಮತ್ತು ಸಮುದಾಯಗಳನ್ನು ಸಮಾನವಾಗಿ ಕಾಣುವ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ, ಆದರೆ ಕನ್ನಡಿಗರು ಯಾವಾಗಲೂ ಅಗ್ರಸ್ಥಾನದಲ್ಲಿರುತ್ತಾರೆಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಹೇಳಿದರು.

ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ನೆಲದಲ್ಲಿ ಬದುಕುತ್ತಿರುವವರೆಲ್ಲರೂ ಕನ್ನಡಿಗರು, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯೇ ಅವರ ಮುಖ್ಯ ಧ್ಯೇಯವಾಕ್ಯ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿ ತಲುಪಬೇಕು ಎಂಬ ಉದ್ದೇಶದಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.

ತಾಲ್ಲೂಕಿನಲ್ಲಿ ಈ ಸಮಾಜ ಅತ್ಯಂತ ಗೌರವಯುವವಾಗಿ ಬದುಕು ನಡೆಸಿ, ಎಲ್ಲಾ ವರ್ಗದವರ ಪ್ರೀತಿಯನ್ನು ಗಳಿಸಿಕೊಂಡು, ಮುಖ್ಯವಾಹಿನಿಯಲ್ಲಿ ಸೇರಿಕೊಂಡು ತಾಲ್ಲೂಕಿನ ಶ್ರೇಯೋಭಿವೃದ್ಧಿಗೆ ನಿರಂತವಾಗಿ ಕೈಜೋಡಿಸಿರುವುದು ಶ್ಲಾಘನೀಯ. ಈ ಸಂಬಂಧ ಬಹಳ ಮುಖ್ಯ. ಇವ ನಮ್ಮವ ಎಂಬ ಧ್ಯೇಯ ಇಟ್ಟುಕೊಂಡಿದ್ದಾರೆ. ಮರಾಠಾ ಅಭಿವೃದ್ಧಿ ನಿಗಮದಿಂದ ರೂಪಿಸಿರುವ ಕಾರ್ಯಕ್ರಮಗಳು ತಾಲ್ಲೂಕಿನ ಫಲಾನುಭವಿಗಳಿಗೆ ಮುಕ್ತವಾಗಿ ಮುಟ್ಟಬೇಕು. ಇವುಗಳನ್ನು ಅರ್ಹ ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಮುದಾಯ ಭವನದಲ್ಲಿ ಸಮಾಜದ ಏಳಿಗೆಗಾಗಿ ಕಾರ್ಯಕ್ರಮಗಳನ್ನು ರೂಪಿಸಿ, ಇತರೆ ಸಮಾಜಗಳನ್ನು ಒಳಗೊಂಡಂತೆ ಕೆಲಸ ಮಾಡಬೇಕು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ದೃಷ್ಟಿಯಿಂದ ಕೆಲಸ ಮಾಡಬೇಕು. ಶಿಗ್ಗಾಂವಿ ಸವಣೂರಿನ ಅಭಿವೃದ್ಧಿಗಾಗಿ ನೂರಾರು ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ಒದಗಿಸಲಾಗುವುದು. ಎಲ್ಲಾ ಸಮಾಜಗಳ ಬೇಡಿಕೆಗಳನ್ನು ಈಡೇರಿಸಲು ಎಲ್ಲಾ ಕ್ರಮ ಜರುಗಿಸಲಾಗುವುದು ಎಂದರು.

ಬಳಿಕ ಛತ್ರಪತಿ ಶಿವಾಜಿ ಮಹಾರಾಜರನ್ನು ಕೊಂಡಾಡಿದ ಅವರು, ಶಿವಾಜಿ ಭಾರತ ಚರಿತ್ರೆಯನ್ನು ಬದಲಾಯಿಸಿದ ಯುಗ ಪುರುಷ, ಸಾಧಕ, ಹಾಗೂ ಪ್ರೇರಣಾ ಶಕ್ತಿ. ಸಾವಿನ ನಂತರವೂ ಪ್ರಬಲ ಶಕ್ತಿ ಜನಪ್ರಿಯತೆ ಹೊಂದಿರುವವರು ವಿರಳ. ಅಂತಹವರನ್ನು ನಾವು ಯುಗಪುರುಷರು ಎನ್ನುತ್ತೇವೆ. ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದರು, ಸುಭಾಷ್ ಚಂದ್ರ ಬೋಸ್ ಯುಗಪುರುಷರು ಎಂದು ಹೇಳಿದರು.

ಭಾರತ ದೇಶವನ್ನು ಗುಲಾಮಗಿರಿಗೆ ಒಡ್ಡುವ ಸಂದರ್ಭದಲ್ಲಿ ಪ್ರಬಲ ತಡೆ ಒಡ್ಡಿ ನಮ್ಮ ಸಂಸ್ಕಂತಿ, ಪರಂಪರೆಯನ್ನು ಉಳಿಸಿ, ಮರುಸ್ಥಾಪಿಸಿದವರು ಛತ್ರಪತಿ ಶಿವಾಜಿ ಮಹಾರಾಜರು. ಮೊಘಲರ ಆಡಳಿತದ ದಿನಗಳ ಸಂದರ್ಭದಲ್ಲಿ ದಕ್ಷಿಣ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ತೈಮೂರ್ ಷಡ್ಯಂತರಕ್ಕೆ ಅನೇಕ ರಾಜ್ಯಗಳು ವಶವಾಗಿದ್ದವು.

ಗುರು ಕೊಂಡೋಜಿ ಹಾಗೂ ತಾಯಿ ಜೀಜಾಬಾಯಿ ಅವರ ಪಾಠದಿಂದ ಧೈರ್ಯ, ಸೌರ್ಯ, ಆತ್ಮಬಲವನ್ನು ಜೋಡಿಸಿ ಶಿವಾಜಿ ಮಹಾರಾಜರು ಗೊರಿಲ್ಲಾ ಯುದ್ಧ ಕಲೆಯಿಂದ ವಿವಿಧ ಪ್ರಾಂತ್ಯಗಳನ್ನು ವಶಪಡಿಸಿಕೊಂಡರು. ಹಿಂದೂ ಸಮಾಜದ ಮೇಲೆ ಅತ್ಯಂತ ನಡೆದ ದಾಳಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು. ಅವರು ಚರಿತ್ರೆ ಮಾತ್ರ ಬದಲಾಯಿಸಲಿಲ್ಲ. ಹೊ¸ ಚರಿತ್ರೆಯನ್ನು ರಚಿಸಿದರು.

ಚಾರಿತ್ರ್ಯವಂತ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಶಿವಾಜಿ ಪ್ರಜೆಗಳನ್ನು ಸುಭಿಕ್ಷವಾಗಿಟ್ಟಿದ್ದರು. ಅಪ್ರತಿಮ ದೇಶಭಕ್ತನ, ಜೀವನಚರಿತ್ರೆಯನ್ನು ಸ್ಮರಿಸಬೇಕು. ಶಿವಾಜಿಯವರ ಕುಲಕ್ಕೆ ಸೇರಿದ ಕ್ಷತ್ರಿಯರು ಅವರ ಜಯಂತಿ ಆಚರಿಸಿರುವುದು ಶ್ಲಾಘನೀಯ ಎಂದರು.


Post a Comment

Previous Post Next Post