ಶಿವಮೊಗ್ಗ ಸಿಟಿಯಲ್ಲಿ ಮುಂದುವರಿದ ರೌಡಿಗಳ ಪರೇಡ್! ಕಾರಣವೇನು?

 ಶಿವಮೊಗ್ಗ ಪೋಲಿಸರು ರೌಡಿಗಳ ಪರೇಡ್ ಮುಂದುವರಿಸಿದ್ದಾರೆ. ಕೋಟೆ ಪೊಲೀಸ್ ಸ್ಟೇಷನ್​ನ ಪೊಲೀಸರ ಬಳಿಕ ಇದೀಗ ತುಂಗಾನಗರ ಪೊಲೀಸ್ ಠಾಣೆ ಪೊಲೀಸ್​ರು ರೌಡಿಗಳ ಪರೇಡ್​ ನಡೆಸಿ ಎಚ್ಚರಿಕೆ ನೀಡಿದ್ಧಾರೆ.  ದಿನಾಂಕ 23-02-2023 ರಂದು   ತುಂಗಾನಗರ ಪೊಲೀಸ್ ಠಾಣೆ ಪಿಎಸ್​ಐ ರಾಜುರೆಡ್ಡಿ ನೇತೃತ್ವದಲ್ಲಿ, ಠಾಣಾ ವ್ಯಾಪ್ತಿಯ ರೌಡಿ ಆಸಾಮಿಗಳನ್ನು ಪೊಲೀಸ್ ಠಾಣೆಗೆ ಕರೆಸಿ ರೌಡಿ ಪರೇಡ್ ಕೈಗೊಳ್ಳಲಾಗಿದೆ. 

ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ  ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೆ  ಇರುವಂತೆ ಎಚ್ಚರಿಕೆ ನೀಡಲಾಗಿದ್ದು, ಒಂದು ವೇಳೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ  ಭಾಗಿಯಾಗುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಗಡಿಪಾರು / ಗೂಂಡಾ ಕಾಯ್ದೆ ರೀತ್ಯಾ ಕ್ರಮ ಕೈಗೊಳ್ಳಲಾಗುವುದೆಂದು  ಎಚ್ಚರಿಕೆ ನೀಡಿರುತ್ತಾರೆ.


Post a Comment

Previous Post Next Post