ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಖಚಿತ: ಸಿಎಂ ಬೊಮ್ಮಾಯಿ

 ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣವಾಗುವುದು ಖಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.

                                                     ಸಿಎಂ ಬೊಮ್ಮಾಯಿ

By : Rekha.M
Online Desk

ಹಾವೇರಿ: ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣವಾಗುವುದು ಖಚಿತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮದೇವರ ಬೆಟ್ಟ ಐತಿಹಾಸಿಕವಾಗಿದ್ದು, ಅಲ್ಲಿ ನೂತನ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಹಲವರ ಆಶಯವಾಗಿತ್ತು. ನನ್ನ ಪ್ರಕಾರ ಯಾರೂ ಇದಕ್ಕೆ ವಿರೋಧ ಮಾಡುವುದಿಲ್ಲ. ವಿರೋಧ ಮಾಡುವವರು ವಿರೋಧಿಸಲಿ. ನನ್ನ ತಕಾರಾರಿಲ್ಲ ಎಂದು ಹೇಳಿದರು.

ಬಿಜೆಪಿ, ಕಾಂಗ್ರೆಸ್ ಹಾಗೀ ಜೆಡಿಎಸ್ ಎಂದು ರಾಮ ಮಂದಿರ ನಿರ್ಮಾಣ ಮಾಡುತ್ತಿಲ್ಲ. ಐತಿಹಾಸಿಕ ರಾಮನ ಬೆಟ್ಟವಿದೆ ಹೀಗಾಗಿ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನವರು ಇಷ್ಟು ದಿನ ಜನರ ಕಿವಿಗೆ ಹೂವಿಟ್ಟಿದ್ದರು. ಸಿದ್ದರಾಮಯ್ಯ ಅವರು ಮಾತಿಗೆ ತಪ್ಪಿದ ಮಗ. ಬಜೆಟ್‌ನಲ್ಲಿ ಹೇಳಿದ್ದ ಯಾವುದನ್ನೂ ಅನುಷ್ಠಾನ ಮಾಡಿಲ್ಲ. ಮೊದಲು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದರು. ಆಮೇಲೆ ಅದನ್ನು 4 ಕೆಜಿಗೆ ಇಳಿಸಿದರು. ಚುನಾವಣೆ ಸಮಯದಲ್ಲಿ 7 ಕೆಜಿಗೆ ಏರಿಸಿದರು. ಹೀಗೆ ಜನರನ್ನು ಯಾಮಾರಿಸಿದ್ದಾರೆ. ಅವರಿಗೆ ಜನ ಶಾಶ್ವತವಾಗಿ ಹೂವಿಡುವ ಕೆಲಸವಾಗುತ್ತದೆ ಎಂದರು.

ಇದೇ ವೇಳೆ ಐಎಎಸ್, ಐಪಿಎಸ್ ಅಧಿಕಾರಿಗಳ ನಡುವಿನ ಜಟಾಪಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.Post a Comment

Previous Post Next Post