ಆನೆ ದಂತದ ಕಲಾಕೃತಿ ಮಾರಾಟ ಮಾಡುತ್ತಿದ್ದ ಐವರ ಬಂಧನ.

 ಹುಬ್ಬಳ್ಳಿ :ಆನೆ ದಂತದಿಂದ ಮಾಡಿರುವ ಕಲಾಕೃತಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ದಂತ ಚೋರರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

   ಎಡಿಜಿಪಿ ಸಿಐಡಿ ಬೆಂಗಳೂರು ಮತ್ತು ಪ್ರಭಾರ ಡಿಐಜಿಪಿ ಸಿಐಡಿ ಅರಣ್ಯ ಘಟಕ ಬೆಂಗಳೂರು ಹಾಗೂ ಪೊಲೀಸ್ ಉಪಾಧೀಕ್ಷಕರು ಸಿಐಡಿ ಅರಣ್ಯ ಘಟಕ ಹುಬ್ಬಳ್ಳಿ ವಿಭಾಗದವರ ಮಾರ್ಗದರ್ಶನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಅರಣ್ಯ ಇಲಾಖೆಯ ಸಿಬ್ಬಂದಿಯು ಐವರನ್ನು ಬಂಧಿಸಿದ್ದು, ಲಕ್ಷಾಂತರ ಮೌಲ್ಯದ ಆನೆ ದಂತದ ಕಲಾಕೃತಿಗಳನ್ನು ವಶಕ್ಕೆ ಪಡೆದಿದ್ದಾರೆ.

Post a Comment

Previous Post Next Post