ಫೆ.13 ರಿಂದ ಸಂತ ಸೇವಾಲಾಲ್ ಜಯಂತೋತ್ಸವ.

 

ಸಂತ ಸೇವಾಲಾಲ್

ಶಿವಮೊಗ್ಗ: ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ವತಿಯಿಂದ ಸಂತ ಸೇವಾಲಾಲ್ ಮಹಾರಾಜರ 284  ನೇ ಜಯಂತೋತ್ಸವ ಫೆ.13  ರಿಂದ 15  ರ ವರೆಗೆ ನ್ಯಾಮತಿ ತಾಲೂಕ್ ಸೂರಗೊಂಡನಕೊಪ್ಪ್ಪದ  ಭಾಯ್ ಘಡ್ ನಲ್ಲಿ ಆಯೋಜಿಸಲಾಗಿದೆ.ಎಂದು ಸಮಿತಿ ಸದಸ್ಯ ಗಿರೀಶ್ ಹೇಳಿದರು.

  "ಜಿಲ್ಲಾಡಳಿತ ಸಹಯೋಗದಲ್ಲಿ  ಕಾರ್ಯಕ್ರಮ ನಡೆಯುತಿದ್ದು ಫೆ.13 ರಂದು ಬೆಳಗ್ಗೆ 8  ಗಂಟೆಗೆ ಸೇವಾಲಾಲ್ ಮಹಾರಾಜರ ಕಾಟಿ ಆರೋಹಣವನ್ನು ರುದ್ರಪ್ಪ ಎಂ ಲಮಾಣಿ  ಮಾಡಲಿದ್ದಾರೆ. ಮಾತಾ ಮರಿಯಮ್ಮದೇವಿಯ ಕಾಟಿ ಆರೋಹಣವನ್ನು ಶಾಸಕ ಪಿ.ರಾಜೀವ್ ಮಾಡಲಿದ್ದಾರೆ. ಮಧ್ಯಾಹ್ನ 3 .00 ರಿಂದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ , ಬಂಜಾರ ಮಹಿಳಾಗೋಷ್ಠಿ , ಬಂಜಾರ ಕವಿಗೋಷ್ಠಿಗಳು ನಡೆಯಲಿವೆ ಎಂದು ಶುಕ್ರವಾರ ತಿಳಿಸಿದರು.

 ಫೆ. 14 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಯಂತೋತ್ಸವ ಉದ್ಘಾಟಿಸಲಿದ್ದಾರೆ . ಸಂಜೆ  5 ರಿಂದ  ಧಾರ್ಮಿಕ ಸಭೆ ನಡೆಯಲಿದೆ. ಮೂರು ದಿನಗಳ ನಡೆಯಲಿರುವ ಕಾರ್ಯಕ್ರಮಗಳಲ್ಲಿ ರಾಜ್ಯ ಮಾತ್ರವಲ್ಲದೆ ಹೊರರಾಜ್ಯದ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂದರು.

Post a Comment

Previous Post Next Post