ಬೆಂಗಳೂರು ಗ್ರಾಮಾಂತರ :ದೇವನಹಳ್ಳಿಯ ಚಿಂತಾಮಣಿಯಿಂದ ಮಹಾರಾಷ್ಟ್ರಕ್ಕೆ ಹಸುಗಳನ್ನು ಸಾಗಿಸುತ್ತಿದ್ದ 19 ಟ್ರಕ್ಕುಗಳನ್ನು ಬಿದಲೂರು ಗ್ರಾಮಸ್ಥರು ಭಾನುವಾರ ತಡೆದು ನಿಲ್ಲಿಸಿದರು. ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವ ಹೊಸ ರಾಷ್ಟೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಲಾರಿಗಳನ್ನು ಅಡ್ಡಗಟ್ಟಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಲಾರಿಗಳಲ್ಲಿ 190 ಕ್ಕೂ ಹೆಚ್ಚಿನ ಕಾರು ಮತ್ತು ಹಸುಗಳನ್ನು ಸಾಗಣೆ ಮಾಡುತ್ತಿದ್ದರು.
ಸಾಗಣೆದಾರರ ಬಳಿ ಪರವಾನಗಿ ಇರಲಿಲ್ಲವೆಂದು ತಿಳಿದುಬಂದಿದೆ. ಸ್ಥಳದಲ್ಲಿ ಜಮಾವಣೆಗೊಂಡ ಸ್ಥಳೀಯರು ಮಹಾರಾಷ್ಟ್ರದ ಚಾಲಕರನ್ನು ತರಾಟೆಗೆ ತೆಗೆದುಕೊಂಡರು.ವಾಗ್ವಾದ ನಡೆದು ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು .ದೇವಹಳ್ಳಿಯ ಕೃಷ್ಣಪ್ಪ ಮತ್ತು ಸಂಗಡಿಗರು ಸ್ಥಳಕ್ಕೆ ಆಗಮಿಸಿ 'ನಾವೇ ಜಾನುವಾರು ನೀಡಿದ್ದೇವೆ ಸಂಘಟನೆಗಳ ಹೆಸರು ಹೇಳಿಕೊಂಡು ವಸೂಲಿಗೆ ಬಂದಿದ್ದಾರೆ'. ಎಂದು ಆರೋಪಿಸಿದರು. ಪೋಲೀಸರ ಮುಂದೆಯೇ ಬಿದಲೂರು ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದರು.
ಲಾರಿಗಳನ್ನು ವಿಶ್ವನಾಥಪುರ ಪೊಲೀಸ್ ಠಾಣೆಗೆ ತರುವಂತೆ ತಿಳಿಸಿದರು. ದೊಡ್ಡಬಳ್ಳಾಪುರ ಮಾರ್ಗವಾಗಿ ತೆರಳುತ್ತಿರುವಾಗಲೇ ಪೊಲೀಸರು 19 ಲಾರಿಗಳ ಪೈಕಿ 16 ಲಾರಿಗಳಿಗೆ ದಂಡ ವಿಧಿಸಿ ಮಹಾರಾಷ್ಟ್ರಕ್ಕೆ ತೆರಳಲು ಒಪ್ಪಿಗೆ ನೀಡಿದ್ದರು. ವಿಶ್ವನಾಥಪುರ ಪೊಲೀಸ್ ಇನ್ಸ್ಪೆಕ್ಟರ್ ದಂಡ ವಿಧಿಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ನಾಯಕರು 'ಯಾವ ಕಾನೂನಿನ ಅಡಿಯಲ್ಲಿ ಈ ರೀತಿ ಹಸುಗಳ ಸಾಗಣೆಗೆ ಅವಕಾಶವಿದೆ , ಯಾವ ಸೆಕ್ಷನ್ ಅಡಿಯಲ್ಲಿ ದಂಡ ವಿಧಿಸುತ್ತಿದ್ದೀರಾ?' ಎಂದು ಪ್ರಶ್ನಿಸಿದರು. ಉತ್ತರ ನೀಡದೆ ಪೊಲೀಸರು ಗಸ್ತು ವಾಹನದಲ್ಲಿ ಅಲ್ಲಿಂದ ಕಾಲ್ಕಿತ್ತರು.
Post a Comment